ನವದೆಹಲಿ, ಡಿ.05 (DaijiworldNews/HR): "ಭಾರತವು ಪಾಕಿಸ್ತಾನದೊಂದಿಗೆ ಸ್ನೇಹ ಹೆಚ್ಚಿಸಿದರೆ ನಮ್ಮ ವ್ಯವಹಾರವೂ ಹೆಚ್ಚಾಗುತ್ತದೆ. ಅಂತೆಯೇ ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದಿಂದ ಪಾಕಿಸ್ತಾನಕ್ಕೆ ಶಾಂತಿ ಮತ್ತು ಸ್ನೇಹ ಬಸ್ ಸೇವೆಯನ್ನು ಪ್ರಾರಂಭಿಸಿದ್ದು, ಅವರ ಯೋಜನೆಯನ್ನು ನಾನು ಮೆಚ್ಚುತ್ತೇನೆ" ಎಂದು ನವಜೋತ್ ಸಿಂಗ್ ಸಿಧು ಹೇಳಿದಾರೆ.
ಪುಲ್ವಾಮಾ ಉಗ್ರ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಅಲಿಖಿತ ವ್ಯಾಪಾರ ಸಮರ ಜಾರಿಯಲ್ಲಿದ್ದು, ಮೊದಲು ಪಾಕಿಸ್ತಾನಕ್ಕೆ ಪಾಠ ಕಲಿಸಲು ಅದರ ಜತೆಗಿನ ಎಲ್ಲ ರಫ್ತು ವಹಿವಾಟನ್ನು ಭಾರತ ನಿಲ್ಲಿಸಿತು.
ಇನ್ನು ಪಾಕಿಸ್ತಾನ ನೀಡಿದ್ದ 'ಅತ್ಯಾಪ್ತ ರಾಷ್ಟ್ರ' ಸ್ಥಾನಮಾನ ರದ್ದುಪಡಿಸಿದ್ದು, ಬಳಿಕ ನಿಧಾನವಾಗಿ ಗಡಿಯಲ್ಲಿ ನಡೆಯುವ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಬರಲಿದೆ ಎನ್ನುವಷ್ಟರಲ್ಲಿಯೇ ಜಮ್ಮು- ಕಾಶ್ಮೀರದಲ್ಲಿದ್ದ ಆರ್ಟಿಕಲ್ 370ಯನ್ನು ಭಾರತ ರದ್ದುಪಡಿಸಿತ್ತು.