ನವದೆಹಲಿ, ಡಿ 05 (DaijiworldNews/MS): ವಿಮಾನಯಾನದ ಸಂದರ್ಭ ಭದ್ರತಾ ತಪಾಸಣೆ ನಡೆಸುವಾಗ ವಿಕಲಚೇತನರಿಗೆ ಅಳವಡಿಸಲಾಗಿರುವ ಕೃತಕ ಅಂಗ ತೆಗೆದು ತೋರಿಸುವಂತೆ ಕೇಳಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಜೀಜಾ ಘೋಷ್ ಇನ್ನಿತರರು ಹಾಗೂ ಭಾರತೀಯ ಒಕ್ಕೂಟ ಮತ್ತಿತರರ ನಡುವಣ ಪ್ರಕರಣ ಸಂದರ್ಭ ವಿಕಲಚೇತನರ ಒಪ್ಪಿಗೆಯಿಲ್ಲದೆ ಅಂಗಾಂಗಳನ್ನು ತೆಗೆದು ನೋಡದಂತೆ ಕ್ರಮ ಕೈಗೊಳ್ಳಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ಸುಪ್ರೀಂಕೋರ್ಟ್ ಹೇಳಿದೆ
ಅಂಗವಿಕಲ ವ್ಯಕ್ತಿಗಳನ್ನು ವಿಮಾನಯಾನ ಸಂಸ್ಥೆಗಳು ನಡೆಸಿಕೊಳ್ಳುವ ಸಂಬಂಧ ನಾಗರಿಕ ವಿಮಾನಯಾನ ಅಗತ್ಯತೆಗಳ ಮಾರ್ಗಸೂಚಿಗಳನ್ನು (ಸಿಎಆರ್) ಅಂತಿಮಗೊಳಿಸುವ ಮೊದಲು ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವಂತೆನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿ ರಾಮಸುಬ್ರಮಣಿಯಂ ಅವರಿದ್ದ ಪೀಠ ಡಿಜಿಸಿಎಗೆ ಹೇಳಿದೆ.