ಅಹಮದಾಬಾದ್, ಡಿ.05 (DaijiworldNews/PY): "ಭಾರತೀಯರು ಸಂಕಷ್ಟದಲ್ಲಿದ್ದಾರೆ. 2019ರಲ್ಲಿದ್ದ ಪರಿಸ್ಥಿತಿಗರ ಹೋಲಿಕೆ ಮಾಡಿದರೆ ಅದಕ್ಕಿಂತ ಕೆಳಮಟ್ಟದಲ್ಲಿದ್ದೇವೆ" ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ತಿಳಿಸಿದ್ದಾರೆ.
ಆನ್ಲೈನ್ ಸಂವಾದಲ್ಲಿ ಮಾತನಾಡಿದ ಅವರು, "ನಾವೀಗ ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೇವೆ ಎಂದು ನಮಗೆ ತಿಳಿದಿಲ್ಲ. ಆದತೆ, ತೀವ್ರ ಕುಸಿತ ಕಂಡಿದ್ದೇವೆ. ಸಣ್ಣ ವ್ಯಾಫಾರಿಗಳು ಸಹ ಮತ್ತಷ್ಟು ಕುಸಿದಿದ್ದಾರೆ. ಇದಕ್ಕೆ ಯಾರನ್ನೂ ನಾನು ದೂಷಿಸುವುದಿಲ್ಲ. ನಾನು ಈ ಬಗ್ಗೆ ತಿಳಿಸುತ್ತಿದ್ದೇನೆ ಅಷ್ಟೆ" ಎಂದಿದ್ದಾರೆ.
"ಸಮಾಜಕ್ಕೆ ವಿದ್ಯಾರ್ಥಿಗಳ ಕೊಡುಗೆ ಅಗತ್ಯ. ಭಾರತದಲ್ಲಿ ಈಗ ತೀವ್ರ ಸಂಕಷ್ಟದ ಸ್ಥಿತಿಯಿದೆ. ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶದಲ್ಲಿ ನಾನು ಕೆಲವು ಸಮಯ ಕಳೆದಿದ್ದೆ. ಅಭಿವೃದ್ದಿಯ ಬಗ್ಗೆ ಕನಸು ಕಂಡವರು ಸಂಕಷ್ಟದಲ್ಲಿದ್ದಾರೆ" ಎಂದು ಹೇಳಿದ್ದಾರೆ.