ಉತ್ತರ ಪ್ರದೇಶ, ಡಿ.05 (DaijiworldNews/HR): ಉತ್ತರ ಪ್ರದೇಶದ ಕಾನ್ಪುರದ ವೈದ್ಯನೊಬ್ಬ ತನ್ನ ಹೆಂಡತಿ ಹಾಗೂ ಮಕ್ಕಳನ್ನು ಹತ್ಯೆಗೈದು ಪರಾರಿಯಾಗಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಹೆಂಡತಿ ಹಾಗೂ ಮಕ್ಕಳನ್ನು ಹತ್ಯೆಗೈದ ಬಳಿಕ ತನ್ನ ಸಹೋದರನಿಗೆ ಕರೆ ಮಾಡಿ ಒಮಿಕ್ರಾನ್ನ ಭೀತಿಯಿಂದ ಈ ಕೊಲೆಗಳನ್ನು ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ತಿಳಿಸುವಂತೆ ವೈದ್ಯ ಹೇಳಿರುವುದಾಗಿ ವರದಿಯಾಗಿದೆ.
ರಾಮಾ ವೈದ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ಔಷಧ ವಿಭಾಗದಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದ ವೈದ್ಯನನ್ನು ಸುಶೀಲ್ ಎಂದು ಗುರುತಿಸಲಾಗಿದ್ದು, ವೈದ್ಯನ ಪತ್ನಿ ಚಂದ್ರಪ್ರಭಾ (48), ಮಗ ಶಿಖರ್ (18) ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿ ಸಂತ್ರಸ್ತರಾಗಿದ್ದಾರೆ.
ಇನ್ನು ಕಾನ್ಪುರದ ಇಂದಿರಾನಗರದ ಡಿವಿನಿಟಿ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದ್ದು, ತನ್ನ ಸಹೋದರ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿ ಸುಶೀಲ್ ಕುಮಾರ್ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಪೊಲೀಸರಿಗೆ ನೋಟ್ ಒಂದು ಅಭಿಸಿದ್ದು, "ನನಗೆ ಹೆಣಗಳನ್ನು ಎಣಿಸಿ ತಲೆ ಕೆಟ್ಟು ಹೋಗಿದೆ, ಒಮಿಕ್ರಾನ್ ಯಾರೊಬ್ಬರನ್ನೂ ಬಿಡುವುದಿಲ್ಲ ಹಾಗಾಗಿ ನಾನು ನೋವಿನಿಂದ ಪ್ರತಿಯೊಬ್ಬರನ್ನೂ ಮುಕ್ತಿಗೊಳಿಸುತ್ತಿದ್ದೇನೆ ಎಂದು ಸುಶೀಲ್ ಕುಮಾರ್ ಬರೆದಿದ್ದಾನೆ.