ಮೀರತ್, ಡಿ.05 (DaijiworldNews/PY): ವೈದ್ಯನೊಬ್ಬ ಮದುವೆ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮೀರತ್ನಲ್ಲಿ ನಡೆದಿದೆ.
ಮುಂಬೈನಲ್ಲಿ ರೇಡಿಯಾಲಜಿಸ್ಟ್ ಆಗಿರುವ ಯುವತಿಯ ಮೇಲೆ ಉತ್ತರಪ್ರದೇಶದ ಮೀರತ್ ಮೆಡಿಕಲ್ ಕಾಲೇಜಿನ ಕಿರಿಯ ವೈದ್ಯ ಅತ್ಯಾಚಾರ ಎಸಗಿದ್ದಾನೆ.
ವೈದ್ಯ ಮದುವೆಯಾಗುವುದಾಗಿ ನಂಬಿಸಿ ಇಂತಹ ಕೃತ್ಯ ವೆಸಗಿದ್ದು, ವಿವಾಹವಾಗಲು ನಿರಾಕರಿಸಿದ್ದಾನೆ ಎಂದು ಸಂತ್ರಸ್ತೆ ದೂರಲಾಗಿದೆ.
ಇಬ್ಬರೂ ಪರಿಚಿತರಾಗಿದ್ದು, ಫೋನ್ ಮೂಲಕವೂ ಸಂಪರ್ಕದಲ್ಲಿದ್ದರು. ಹಲವು ಬಾರಿ ನಗರದ ಹೋಟೆಲ್ಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಫೋಟೋಗಳನ್ನು ಸಹ ತೆಗೆದುಕೊಂಡಿದ್ದಾನೆ ಎಂದು ನೌಚಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.