ಬೆಂಗಳೂರು, ಡಿ 05 (DaijiworldNews/MS): ನಾಲ್ಕು ಬಾರಿ ಪರಿಷತ್ ಶಾಸಕರಾಗಿ, ಪರಿಷತ್ ವಿಪಕ್ಷ ನಾಯಕರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಎಸ್.ಆರ್. ಪಾಟೀಲ್ ಇದ್ದರೂ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿ ಹೋಗಿರುವ ಹಿನ್ನಲೆಯಲ್ಲಿ ಮುನಿಸಿಕೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಎಸ್.ಆರ್. ಪಾಟೀಲ್ ಮನವೊಲಿಕೆಗೆ ಕೈ ಪಕ್ಷದ ನಾಯಕರು ಕಸರತ್ತು ನಡೆಸುತ್ತಿದ್ದಾರೆ.
ಶನಿವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಮಾಜಿ ಶಾಸಕ ಜೆ.ಟಿ. ಪಾಟೀಲ್ ಅವರು ಎಸ್.ಆರ್.ಪಾಟೀಲ್ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಮನವೊಲಿಕೆ ಯತ್ನ ನಡೆಸಿದರು.
ಪ್ರಸ್ತುತವಾಗಿ ಎಸ್.ಆರ್. ಪಟೀಲ್ ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹೀಗಿದ್ದೂ ಅವರಿಗೆ ಟಿಕೆಟ್ ತಪ್ಪಿರುವುದು ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಅಚ್ಚರಿ ಹುಟ್ಟಿಸಿತ್ತು.ಇನ್ನೊಂದೆಡೆ ಇದೆಲ್ಲ ಬೆಳವಣಿಗೆಯಿಂದ ಬೇಸರಗೊಂಡಿರುವ ಎಸ್.ಆರ್.ಪಾಟೀಲ್ ಪ್ರಚಾರದಿಂದ ದೂರ ಉಳಿದಿದ್ದು ಇದು ಫಲಿತಾಂಶದ ಮೇಲೆ ಪರಿಣಾ ಬೀರಬಹುದು ಎಂಬ ಆತಂಕ ಕಾಂಗ್ರೆಸ್ ಕಾಡತೊಡಗಿದೆ. ಈ ಹಿನ್ನಲೆಯಲ್ಲಿ ಕೈ ನಾಯಕರು ಭೇಟಿ ಮಾಡಿ ಮನವೊಲಿಕೆ ಯತ್ನ ನಡೆಸಿದ್ದಾರೆ.