ಮೈಸೂರು, ಡಿ.04 (DaijiworldNews/PY): "ಶಾಸಕ ಜಿ ಟಿ ದೇವೇಗೌಡರಿಗೆ ಜೆಡಿಎಸ್ ಬಾಗಿಲು ಶಾಶ್ವತವಾಗಿ ಮುಚ್ಚಿದೆ" ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹೆಚ್ ಡಿ ದೇವೇಗೌಡರು, ನಾನು ಹಾಗೂ ಪುತ್ರ ನಿಖಲ್ ಜಿ ಟಿ ದೇವೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೆವು. ಆದರೆ, ಜಿಟಿಡಿ ಅವರು ಯಾರದ್ದೋ ಕಲ್ಯಾಣಕ್ಕಾಗಿ, ಯಾರನ್ನೋ ಮುಖ್ಯಮಂತ್ರಿ ಮಾಡಲು ದೇಗುಲದಲ್ಲಿ ಕಲ್ಯಾಣೋತ್ಸವ ಮಾಡಿಸಿದ್ದಾರೆ. ಆದರೆ, ನಾನು ಬಡವ, ರೈತರ ಕಲ್ಯಾಣಕ್ಕಾಗಿ ಹೋರಾಡುತ್ತೇನೆ" ಎಂದಿದ್ದಾರೆ.
"ಜೆಡಿಎಸ್ಗೆ 2023ರಲ್ಲಿ ಲಾಭವಾಗಲಿದೆ. ವಿಧಾನ ಪರಿಷತ್ ಚುನಾವಣೆಯಲ್ಲೂ ಸ್ವಲ್ಪ ಅನುಕೂಲವಾಗಲಿದೆ. ಜೆಡಿಎಸ್ಗೆ ಬಿಜೆಪಿ ಬೆಂಬಲಿಗರ ಮತ ಬರಲಿದೆ" ಎಂದು ಹೇಳಿದ್ದಾರೆ.