ಬೆಂಗಳೂರು, ಡಿ.04 (DaijiworldNews/PY): "ಕೊರೊನಾ ಸಾಂಕ್ರಾಮಿದ ಸಾವಿನ ವಿಚಾರದಲ್ಲೂ ರಾಜಕಾರಣ ನಡೆಸುವ ಹೀನ ಮನಸ್ಥಿತಿಗೆ ಕಾಂಗ್ರೆಸ್ ಪಕ್ಷ ಇಳಿದಿರುವುದು ದುರಂತ" ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟವರ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ಸಿಗರೇ, ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದೂಗಳ ಮಾರಣ ಹೋಮದ ಲೆಕ್ಕ ದೇಶದ ಮುಂದಿಡುವಿರಾ?" ಎಂದು ಪ್ರಶ್ನಿಸಿದೆ.
"ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟವರ ಹೆಸರಿನಲ್ಲಿ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ಸಿಗರೇ, ಕಾಂಗ್ರೆಸ್ ಪ್ರಾಯೋಜಿತ ಸಿಖ್ ಹತ್ಯಾಕಾಂಡದಲ್ಲಿ ನೀವು ನಡೆಸಿದ ನರಮೇಧದ ಲೆಕ್ಕ ಕೊಡುವಿರಾ?" ಎಂದು ಕೇಳಿದೆ.
"ಕೊರೊನಾ ಸಾಂಕ್ರಾಮಿದ ಸಾವಿನ ವಿಚಾರದಲ್ಲೂ ರಾಜಕಾರಣ ನಡೆಸುವ ಹೀನ ಮನಸ್ಥಿತಿಗೆ ಕಾಂಗ್ರೆಸ್ ಪಕ್ಷ ಇಳಿದಿರುವುದು ದುರಂತ. ಸಾವನ್ನು ವಿಜೃಂಭಿಸುವಾಗಲೂ ಅಂತಃಕರಣ ಪ್ರಶ್ನಿಸುವುದಿಲ್ಲವೇ? ನಕಲಿ ಗಾಂಧಿ ಕುಟುಂಬ ನಿರ್ದೇಶಿತ ನಾಟಕ ಇಷ್ಟು ಕೀಳುಮಟ್ಟಕ್ಕೆ ಇಳಿದಿದೆಯೇ?" ಎಂದು ಪ್ರಶ್ನಿಸಿದೆ.
"ಕೋವಿಡ್ ಸಾಂಕ್ರಾಮಿಕದ ಮೊದಲನೆಯ ಅಲೆಯ ಬಳಿಕ ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿರೋಧಿಸಿದ್ದೇ ಕಾಂಗ್ರೆಸ್. ಲಸಿಕಾ ಅಭಿಯಾನ ನಡೆಸುವ ಪ್ರಧಾನಿ ಕರೆಗೆ ವಿರೋಧ ಲಸಿಕೆಯ ಫಲಿತಾಂಶದ ಬಗ್ಗೆ ಅನುಮಾನ, ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆಗೆ ಪ್ರೇರೇಪಣೆ, ಕೋವಿಡ್ ಸಮಯದಲ್ಲಿ ಇವೇ ಅಲ್ಲವೇ ನಿಮ್ಮ ಸಾಧನೆ?" ಎಂದು ಕೇಳಿದೆ.
"ಕೋವಿಡ್ ನಿಯಂತ್ರಣ ಸಂಬಂಧಿತವಾಗಿ ಸರ್ಕಾರದ ಎಲ್ಲಾ ಕ್ರಮಗಳನ್ನು ವಿರೋಧಿಸುತ್ತಾ ಬಂದ ಕಾಂಗ್ರೆಸ್ ಇಂದು ಬೂಟಾಟಿಕೆ ತೋರುತ್ತಿದೆ. ಕೋವಿಡ್ ಪರಿಹಾರ ಕ್ರಮಗಳ ಬಗ್ಗೆ ಅಸಡ್ಡೆ ತೋರಿ, ದುರಿತ ಕಾಲದಲ್ಲಿ ದೇಶದ ಜೊತೆ ನಿಲ್ಲದೆ, ಈಗ ಸತ್ತವರ ಹೆಸರಿನಲ್ಲಿ ರಾಜಕಾರಣ ಮಾಡಲು ನಾಚಿಕೆಯಾಗುವುದಿಲ್ಲವೇ?" ಎಂದು ಪ್ರಶ್ನಿಸಿದೆ.