ನವದೆಹಲಿ, ಡಿ.04 (DaijiworldNews/PY): ದೀರ್ಘಕಾಲದ ಅನಾರೋಗ್ಯದಿಂದ ಹಿರಿಯ ಪತ್ರಕರ್ತ ವಿನೋದ್ ದುವಾ (67) ಅವರು ಶನಿವಾರ ಹಲಿಯ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೊರೊನಾ ಸೋಂಕಿನ ಬಳಿಕ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಿನೋದ್ ಅವರನ್ನು ಕಳೆದ ವಾರ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು.
ತಂದೆ ನಿಧನರಾಗಿದ್ದಾರೆ ಎಂದು ವಿನೋದ್ ದುವಾ ಅವರ ಪುತ್ರಿ ಮಲ್ಲಿಕಾ ದುವಾ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಖಚಿತಪಡಿಸಿದ್ದಾರೆ.
ದುವಾ ಅವರ ದೂರದರ್ಶನ ಹಾಗೂ ಎನ್ಡಿ ಟಿವ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವಿ ಪತ್ರಕರ್ತರಾಗಿದ್ದರು.
ಇವರಿಗೆ 2008ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.