ಬೆಂಗಳೂರು, ಡಿ 04 (DaijiworldNews/MS): ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿ ಹೊರಗಡೆಯವರಿಗೆ ಪ್ರವೇಶ ಕೊಡದಂತೆ ನಿರ್ಬಂಧಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿರುವವರು ಹೊರಗಿನ ವ್ಯಕ್ತಿಗಳ ಭೇಟಿ ಮಾಡುವಾಗ ಎಚ್ಚರಿಕೆಯಿಂದಿರಬೇಕು. ಎರಡು ಡೋಸ್ ಆಗಿರುವ ಹೊರಗಿನ ವ್ಯಕ್ತಿಗಳನ್ನು ಮಾತ್ರ ಕ್ಲಸ್ಟರ್ ನಲ್ಲಿರುವವರು ಭೇಟಿ ಮಾಡಬೇಕು. ಅಲ್ಲದೆ ಇಲ್ಲಿ ವಾಸ ಇರುವ ನಿವಾಸಿಗಳಿಗೆ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಹಾಕಲು ಸೂಚನೆ ನೀಡಲಾಗಿದೆ" ಎಂದು ಸಿಎಂ ಹೇಳಿದರು.
ಪೊಲೀಸರ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಪದಗಳ ಬಳಕೆ ವಿಚಾರವಾಗಿ ಪ್ರತಿಕ್ರಿಯ್ಸಿದ ಮುಖ್ಯಮಂತ್ರಿಗಳ್ಳು, ಈ ಕುರಿತು ಗೃಹ ಸಚಿವರ ಜತೆ ಇದರ ಬಗ್ಗೆ ಮಾತಾಡಿದ್ದೇನೆ. ಗೃಹ ಸಚಿವರು ಸ್ಪಷ್ಠೀಕರಣ ಕೊಟ್ಟಿದಾರೆ. ಪೊಲೀಸರ ಬಗ್ಗೆ ಗೃಹ ಸಚಿವರಿಗೆ ಬಹಳ ಕಾಳಜಿಯಿದೆ. ಎಲ್ಲ ಪೊಲೀಸರಿಗೂ ಆರಗ ಜ್ಞಾನೇಂದ್ರರು ಆ ಮಾತುಗಳನ್ನು ಹೇಳಲಿಲ್ಲ. ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಕೆಲವು ಪೊಲೀಸರಿಗೆ ಹಾಗೆ ಮಾತಾಡಿರುವುದಾಗಿ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.