ನವದೆಹಲಿ, ಡಿ 04 (DaijiworldNews/MS): ಕೋವಿಡ್-19 'ಓಮಿಕ್ರಾನ್' ರೂಪಾಂತರದ ಸೋಂಕಿಗೆ ಒಳಗಾಗಿರುವ ಶಂಕಿತ 12 ರೋಗಿಗಳನ್ನು ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ್ (ಎಲ್ಎನ್ಜೆಪಿ) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಒಮಿಕ್ರಾನ್ ವೈರಸ್ ಪತ್ತೆಯಾದಂತ ಹೈ ರಿಸ್ಕ್ ದೇಶಗಳಿಂದ ದೆಹಲಿಗೆ 12 ಜನರು ಪ್ರಯಾಣಿಕರು ನಿನ್ನೆ ಆಗಮಿಸಿದ್ದಾರೆ. ಅವರನ್ನು ಆರ್ ಟಿ ಪಿಸಿಆರ್ ಪರೀಕ್ಷೆಗೆ ಒಳಪಡಿಸಿದಾಗ, 12 ಜನರಲ್ಲಿ ಎಂಟು ಜನರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಅವರ ಗಂಟಲು ದ್ರವದ ಮಾದರಿಯನ್ನು ಒಮಿಕ್ರಾನ್ ವೈರಸ್ ಸೋಂಕು ಪತ್ತೆ ಪರೀಕ್ಷೆಗಾಗಿ ಜೀನೋಮಿಕ್ಸ್ ಸೀಕ್ವೆನ್ಸ್ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ಈ ಪೈಕಿ ನಾಲ್ವರು ಶಂಕಿತರಲ್ಲಿ ಇಬ್ಬರು ಬ್ರಿಟನ್ ನಿಂದ ಬಂದವರು, ಒಬ್ಬರು ಫ್ರಾನ್ಸ್ನಿಂದ ಮತ್ತು ಒಬ್ಬರು ನೆದರ್ಲ್ಯಾಂಡ್ನಿಂದ ಬಂದವರು ಎಂದು ತಿಳಿದುಬಂದಿದೆ.
ಇದೀಗ ಅವರ ಜೀನೋಮಿಕ್ಸ್ ಅನುಮಕ್ರಮಣಿಕೆ ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಇವರನ್ನು ದೆಹಲಿಯ ಎಲ್ ಎನ್ ಜೆ ಪಿ ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.