ಹೈದರಾಬಾದ್, ಡಿ 04 (DaijiworldNews/MS): ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಕೆ. ರೋಸಯ್ಯ (89) ಇಂದು ನಿಧನರಾಗಿದ್ದಾರೆ. ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ, ತಮಿಳುನಾಡು ರಾಜ್ಯಪಾಲರಾಗಿ ಅವರು ಸೇವೆ ಸಲ್ಲಿಸಿದ್ದರು.
ಹೈದರಾಬಾದ್ ನ ನಿವಾಸದಲ್ಲಿ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಸ್ವಸ್ಥರಾಗಿದ್ದ ಅವರನ್ನು ಹೈದರಾಬಾದ್ ನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಕಾಂಗ್ರೆಸ್ ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ರೋಸಯ್ಯ ಅವರು, ಶಾಸಕರಾಗಿ, ಸಂಸದರಾಗಿ ಮುಖ್ಯಮಂತ್ರಿಯಾಗಿ, ತಮಿಳುನಾಡಿನ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ರೋಸಯ್ಯ ಅವರು ಕರ್ನಾಟಕದ ಹಂಗಾಮಿ ರಾಜ್ಯಪಾಲರಾಗಿ 63 ದಿನಗಳ ಕಾಲ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಗವರ್ನರ್ ಆಗಿ ಸೇವೆ ಅವರು ಸಲ್ಲಿಸಿದ್ದರು.