ನವದೆಹಲಿ, ಡಿ.03 (DaijiworldNews/PY): ಪಂಜಾಬ್ ಕೀರತ್ಪುರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಾರನ್ನು ಇಂದು ರೈತ ನಾಯಕರು ತಡೆದಿದ್ದು, ಘೋಷಣೆ ಕೂಗಿದ್ದಾರೆ.
ಈ ವೇಳೆ ಘೇರಾವ್ ಮಾಡಿದ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಪೊಲೀಸ್ ಸಿಬ್ಬಂದಿ ಶ್ರಮಿಸಬೇಕಾಯಿತು ಎಂದು ವರದಿ ತಿಳಿಸಿದೆ.
"ಚಂಡೀಗಡ-ಉನ ಹೈವೇನಲ್ಲಿ ಬಂಗಾ ಸಾಹಿಬ್, ಕೀರತ್ಪುರ್ ಸಾಹಿಬ್ ಬಳಿ ಈ ಘಟನೆ ನಡೆದಿದೆ" ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ.
"ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಘಟನೆಯ ಬಗ್ಗೆ ತಿಳಿದ ಬಳಿಕ ಬಳಿಕ ಪ್ರತಿಕ್ರಿಯಿಸುತ್ತೇನೆ" ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ರೈತ ಪ್ರತಿಭಟನೆಯ ಬಗ್ಗೆ ಮಾಡಿದ ಇನ್ಸ್ಟಾಗ್ರಾಂ ಪೋಸ್ಟ್ ಮಾಡಿದ ಹಿನ್ನೆಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಳೆದ ಮಂಗಳವಾರ ಎಫ್ಐಆರ್ ಸಲ್ಲಿಸಿದ್ದರು ಎಂದು ವರದಿ ಹೇಳಿದೆ.