ಬೆಂಗಳೂರು, ಡಿ.03 (DaijiworldNews/PY): "ರಾಜ್ಯದಲ್ಲಿ ಓಮ್ರಿಕಾನ್ ಸೋಂಕು ಪ್ರಕರಣ ದೃಢಪಟ್ಟ ಹಿನ್ನೆಲೆ ವಿವಾಹ ಸಮಾರಂಭದಲ್ಲಿ 500 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು" ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಸಿಎಂ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಾಲಾ-ಕಾಲೇಜುಗಳಲ್ಲಿ ಸಭೆ, ಸಮಾರಂಭ ಮಾಡಬಾರದು, ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ, ಪೋಷಕರಿಗೆ ವ್ಯಾಕ್ಸಿನ್ ಕಡ್ಡಾಯ, ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು" ಎಂದಿದ್ದಾರೆ.
"ವಿವಾಹದಲ್ಲಿ 500 ಮಂದಿಗೆ ಮಾತ್ರ ಅವಕಾಶ, ವಿಮಾನ ನಿಲ್ದಾಣದಲ್ಲಿ ಟೆಸ್ಟಿಂಗ್ ಕಡ್ಡಾಯ, ಎರಡು ಡೋಸ್ ಲಸಿಕೆ ಆಗಿದ್ದರೆ ಮಾತ್ರವೇ ಮಾಲ್, ಥಿಯೇಟರ್ ಪ್ರವೇಶಕ್ಕೆ ಅವಕಾಶ, ರಾಜ್ಯಾದ್ಯಂತ ಕಂಟ್ರೋಲ್ ರೂಂ ಮತ್ತೆ ಆರಂಭಿಸಲಾಗುವುದು" ಎಂದು ಹೇಳಿದ್ದಾರೆ.