ನವದೆಹಲಿ, ಡಿ.03 (DaijiworldNews/PY): "ನಗರಗಳ ಕೊಳಚೆ ನೀರು ಹಾಗೂ ಘನತ್ಯಾಜ್ಯದಿಂದ ಉತ್ಪಾದಿಸಬಹುದಾದ ಗ್ರೀನ್ ಹೈಡ್ರೋಜನ್ ಬಳಸಿ ಬಸ್, ಕಾರು ಹಾಗೂ ಲಾರಿ ಓಡಿಸುವ ಯೋಜನೆ ನನ್ನದಾಗಿದೆ" ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
6ನೇ ರಾಷ್ಟ್ರೀಯ ಹಣಕಾಸು ಶೃಂಗವನ್ನು ಉದ್ದೇಶಿಸಿ ಮಾತನಾಡಿದ ಅವರು, "ತ್ಯಾಜ್ಯ ವಸ್ತುಗಳಿಗೆ ಮೌಲ್ಯ ತಂದುಕೊಡುವ ಯೋಜನೆ ಸಿದ್ದಪಡಿಸುತ್ತಿದ್ದು, ವಿವಿಧ ನಗರಗಳಲ್ಲಿ ಗ್ರೀನ್ ಹೈಟ್ರೋಜನ್ ಬಳಸಿ ಕಾರು, ಲಾರಿ ಹಾಗೂ ಬಸ್ಗಳನ್ನು ಓಡಿಸಿವ ಯೋಜನೆ ಇದೆ" ಎಂದು ತಿಳಿಸಿದ್ದಾರೆ.
"ಈ ನಿಟ್ಟಿನಲ್ಲಿ ಕಸಕ್ಕೆ ಮೌಲ್ಯ ತಂದುಕೊಡಲು ನಾನು ಪ್ರಯತ್ನಿಸುತ್ತೇನೆ" ಎಂದು ಹೇಳಿದ್ದಾರೆ.
"ನಾನು ಫರಿದಾಬಾದ್ನ ತೈಲ ಸಂಶೋಧನಾ ಸಂಸ್ಥೆಯಲ್ಲಿ ಉತ್ಪಾದಿಸುವ ಹಸಿರು ಹೈಡ್ರೋಜನ್ನಿಂದ ಚಲಿಸುವ ಪೈಲಟ್ ಪ್ರಾಜೆಕ್ಟ್ ಕಾರನ್ನು ಖರೀದಿ ಮಾಡಿದ್ದೇನೆ. ಈ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಲು ನಗರದಲ್ಲಿ ಓಡಿಸುತ್ತೇನೆ" ಎಂದಿದ್ದಾರೆ.