ಹೈದರಾಬಾದ್, ಡಿ. 03 (DaijiworldNews/HR): ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ತೆಲ್ಲಪುರ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿ ಘಟನೆ ನಡೆದಿದೆ.
ಗಂಡ ಚಂದ್ರಕಾಂತ್ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮಗ ಪ್ರೀತಂ (9) ಮತ್ತು ಮಗಳು ಸರ್ವಜ್ಞ (ಒಂದೂವರೆ ವರ್ಷ) ಇಬ್ಬರನ್ನು ಕೆರೆಗೆ ಎಸೆದು ತಾನು ಕೆರೆಗೆ ಹಾರಿ ಪತ್ನಿ ಲಾವಣ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಚಂದ್ರಕಾಂತ ರಾವ್ ಅವರು ಬ್ಯಾಂಕ್ನಲ್ಲಿ ಸಾಲ ಪಡೆದು ಬಿಎಚ್ಇಎಲ್ ಬಳಿಯ ಬೈರಗುಡದಲ್ಲಿ ಅಪಾರ್ಟ್ಮೆಂಟ್ ಖರೀದಿಸಿದ್ದರು. ಆದರೆ, ಚಂದ್ರಕಾಂತ್ಗೆ ಸಾಲ ತೀರಿಸುವುದು ಕಷ್ಟವಾಗಿತ್ತು. ಅವರ ತಂದೆ ಬಿಎಚ್ಇಎಲ್ ನಿವೃತ್ತ ನೌಕರರಾಗಿದ್ದರಿಂದ ಆರ್ಥಿಕ ಸಹಾಯ ಮಾಡುವಂತೆ ಕೋರಿದ್ದರು. ಆದರೆ ತಂದೆ ನಿರಾಕರಿಸಿದ್ದರಂತೆ. ಇದೇ ವಿಚಾರವಾಗಿ ಕಳೆದ ಒಂದು ವರ್ಷದಿಂದಲೂ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ನಿರಂತರ ಜಗಳದಿಂದ ಮನನೊಂದಿದ್ದ ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.