ಅಸ್ಸಾಂ, ಡಿ. 03 (DaijiworldNews/HR): ಭಾರತವು ಹಿಂದೂ ಬಾಹುಳ್ಯದ ದೇಶವಾಗಿದ್ದು, ಬಾಬರ್ನ ಕಾಲಕ್ಕೂ ಮುಂಚೆ ಇಲ್ಲಿನವರೆಲ್ಲಾ ಹಿಂದೂಗಳೇ ಆಗಿದ್ದರು ಎಂದು ಸಿಎಎ ಪರವಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಾಂತಾ ಬಿಸ್ವಾ ಶರ್ಮಾ ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಭಾರತ ಹಿಂದೂ ಬಹುಸಂಖ್ಯಾತ ದೇಶ. ಭಾರತದ ಹೊರಗೆ ತೊಂದರೆಯಲ್ಲಿ ಸಿಲುಕಿರುವ ಹಿಂದೂಗಳು ದೇಶಕ್ಕೆ ಬರಲು ಸ್ವಾಗತ ಕೋರಲಾಗುವುದು" ಎಂದು ತಿಳಿಸಿದ್ದಾರೆ.
ಇನ್ನು ಭಾರತದ ಹೊರಗಿರುವ ಯಾವುದೇ ಹಿಂದೂ ತೊಂದರೆ ಅನುಭವಿಸುತ್ತಿದ್ದಲ್ಲಿ ಆತ ಭಾರತಕ್ಕೆ ಬರಲು ಸ್ವಾಗತ ಕೋರುತ್ತೇನೆ. ಬಾಬರ್ನ ಕಾಲಕ್ಕೂ ಮುಂಚೆ ಭಾರತದಲ್ಲಿದ್ದ ಎಲ್ಲರೂ ಹಿಂದೂಗಳೇ ಆಗಿದ್ದರು" ಎಂದಿದ್ದಾರೆ.
ದೇಗುಲ ನಿರ್ಮಾಣದ ಕೆಲಸವನ್ನು ಕೋಮುವಾದವೆಂದು ದೇಶದಲ್ಲಿ ನೋಡುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು, "ಬರೀ ದೇಗುಲ ನಿರ್ಮಾಣದ ಕೆಲಸವನ್ನು ಮಾತ್ರವೇ ಏಕೆ ಭಾರತದಲ್ಲಿ ಕೋಮುವಾದದ ದೃಷ್ಟಿಯಿಂದ ನೋಡಬೇಕು ? ಎಂದು ಪ್ರಶ್ನಿಸಿದ್ದಾರೆ.