ಬೆಂಗಳೂರು, ಡಿ. 03 (DaijiworldNews/HR): ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ ಆರೋಪ ಮಾಡಿರುವ ಸಚಿವ ಎಸ್.ಟಿ. ಸೋಮಶೇಖರ್ ವಿರುದ್ಧ ಹೆಚ್. ವಿಶ್ವನಾಥ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಎಸ್.ಟಿ. ಸೋಮಶೇಖರ್ ಒಬ್ಬ ಮಂತ್ರಿಯಾಗಿ ಈ ರೀತಿಯ ಮಾತುಗಳನ್ನು ಆಡಬಾರದಿತ್ತು. ಇದರಿಂದ ಬಾಬು ಮನೆಯವರಿಗೆ ಎಷ್ಟು ನೋವಾಗಿದೆ. ಸೋಮಶೇಖರ್ ಈ ರೀತಿ ವೈಯಕ್ತಿಕ ಟೀಕೆ ಮಾಡಿದ್ದು ಸರಿಯಲ್ಲ" ಎಂದರು.
ಇನ್ನು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಗೋಪಾಲಕೃಷ್ಣ ಹಾಗೂ ವಿಶ್ವನಾಥ್ ಇಬ್ಬರೂ ರಿಯಲ್ ಎಸ್ಟೇಟ್ ಗಿರಾಕಿಗಳು. ಅವರಿಬ್ಬರದು ಏನೇನು ಇದೆಯೋ ಯಾರಿಗೆ ಗೊತ್ತು? ಎಂದು ಪ್ರಶ್ನಿಸಿದ್ದಾರೆ.