ಬೆಂಗಳೂರು, ಡಿ. 03 (DaijiworldNews/HR): ಒಮಿಕ್ರೋನ್ ದೃಢಪಟ್ಟ ಸೋಂಕಿತ ವೈದ್ಯರ ಪತ್ನಿಗೂ ಕೊರೊನಾ ಸೋಂಕು ಕಂಡುಬಂದಿದ್ದು, ಅವರ ಮನೆಯಲ್ಲಿದ್ದ 8 ಮಂದಿಯ ವರದಿ ನೆಗೆಟಿವ್ ಆಗಿದ್ದು ಸಮಾಧಾನವನ್ನು ಮೂಡಿಸಿದೆ.
ಸಾಂದರ್ಭಿಕ ಚಿತ್ರ
ವೈದ್ಯರ ಪತ್ನಿಗೆ ಕೊರೊನಾ ಪಾಸಿಟಿವ್ ಕಂಡುಬಂದಿರುವ ಹಿನ್ನಲೆಯಲ್ಲಿ ಆರ್ಬಿಐ ಲೇಔಟ್ನ 100 ಮೀಟರ್ ರಸ್ತೆಯನ್ನು ಬಿಬಿಎಂಪಿ ಬ್ಯಾರಿಕೇಡ್, ರೆಡ್ಟೇಪ್ ಹಾಕಲಾಗಿದ್ದು ಸೋಂಕಿತ ವೈದ್ಯರ ಮನೆಗೆ ನಿರ್ಬಂಧಿತ ಪ್ರದೇಶ ಎಂದು ಸೂಚಿಸಲಾಗಿದೆ.
ಇನ್ನು ಸದ್ಯ ಒಮಿಕ್ರೋನ್ ಸೋಂಕಿತ ವೈದ್ಯ ಹಾಗು ಪತ್ನಿಯನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ವೈದ್ಯರ ಮನೆಯಲ್ಲಿ ಒಟ್ಟು 10 ಮಂದಿಯಿದ್ದು, ಉಳಿದ 8 ಮಂದಿಯ ವರದಿ ಕೊರೊನಾ ನೆಗೆಟಿವ್ ಆಗಿ 8 ಮಂದಿಯನ್ನು ಹೋಮ್ ಐಸೋಲೇಷನ್ನಲ್ಲಿ ಇರಿಸಲಾಗಿದೆ.