ಬೆಂಗಳೂರು, ಡಿ. 03 (DaijiworldNews/HR): 'ಬಿಗ್ ಬಾಸ್' ಕನ್ನಡದ ಸ್ಪರ್ಧಿ, ನಟ ಕಿರಿಕ್ ಕೀರ್ತಿ ಅವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಸದಾಶಿವನಗರದ ಪಬ್ ನಲ್ಲಿ ಗುರುವಾರ ರಾತ್ರಿ ಕಿರಿಕ್ ಕೀರ್ತಿ ಸ್ನೇಹಿತರ ಜೊತೆಗೆ ಇದ್ದು, ಈ ವೇಳೆ ಅವರ ಫೋಟೊ ಕ್ಲಿಕ್ಕಿಸಿದ್ದಕ್ಕೆ ಜಗಳವಾಗಿದೆ. ಪಕ್ಕದ ಟೇಬಲ್ ನಲ್ಲಿದ್ದ ವ್ಯಕ್ತಿ ಫೋಟೋ ಕ್ಲಿಕ್ಕಿಸಿದ್ದನ್ನು ಕೀರ್ತಿ ಪ್ರಶ್ನೆ ಮಾಡಿದ್ದು, ಫೋಟೋ ಕ್ಲಿಕ್ಕಿಸಿದ ವ್ಯಕ್ತಿ ಕ್ಷಮೆ ಕೇಳಿದರೂ ಬಿಡದೆ ಕಿರಿಕ್ ಕೀರ್ತಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ಇನ್ನು ಆ ಬಳಿಕ ವ್ಯಕ್ತಿಯ ಮೊಬೈಲ್ ಕಸಿದುಕೊಳ್ಳಲು ಕೀರ್ತಿ ಪ್ರಯತ್ನ ನಡೆಸಿದ್ದು, ಈ ವೇಳೆ ರೋಸಿ ಹೋದ ವ್ಯಕ್ತಿ ಕೀರ್ತಿ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.