ಸಾಗರ, ಡಿ 03 (DaijiworldNews/MS): ಕಡಿದ ಮರದ ದಿಮ್ಮಿಗಳ ಮಧ್ಯೆ ಸಿಲುಕಿ ಮಗು ಸಾವನ್ನಪ್ಪಿದ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅಂಬಾರಗೊಡ್ಲು ಸಮೀಪದ ಹುಲಿದೇವರ ಬನ ಗ್ರಾಮದಲ್ಲಿ ನಡೆದಿದೆ. 5 ವರ್ಷದ ಶ್ರಾವಣಿ ಸಾವನ್ನಪ್ಪಿರುವ ದುರ್ದೈವಿ.
ಎಂಪಿಎಂ ಸ್ವಾಮ್ಯದ ನಡುತೋಪಿನಲ್ಲಿ ಮರಗಳ ಕಡಿಯಲು ಬಳ್ಳಾರಿಯಿಂದ ಜಿಲ್ಲೆಗೆ ಬಡ ಕುಟುಂಬಗಳು ಬಂದಿದ್ದವು. ಈ ವೇಳೆ, ಘಟನೆ ಸಂಭವಿಸಿದೆ. ಮರದ ದಿಮ್ಮಿಗಳ ಸಮೀಪ ಆಟವಾಡುತ್ತಿದ್ದ ಶ್ರಾವಣಿ ಮೇಲೆ ಮರದ ದಿಮ್ಮಿಗಳು ಕುಸಿದಿದೆ. ಇವುಗಳ ನಡುವೆ ಸಿಲುಕಿದ್ದ ಬಾಲಕಿ ಸಾವಿಗೀಡಾಗಿದ್ದಾಳೆ.
ಅರಣ್ಯಾಧಿಕಾರಿಗಳ ಬೇಜವಾಬ್ದಾರಿಗೆ ಪೋಷಕರ ಆಕ್ರೋಶ ಕೇಳಿಬಂದಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.