ಬೆಂಗಳೂರು, ಡಿ.02 (DaijiworldNews/SM): ನಗರದಲ್ಲಿ ಸೋಂಕು ಪತ್ತೆಯಾದವರ ಪೈಕಿ ಒಬ್ಬರು ವೈದ್ಯರಾಗಿದ್ದು, ಅವರ ಟ್ರಾವೆಲ್ ಹಿಸ್ಟರಿ ಪತ್ತೆಹಚ್ಚಲಾಗುತ್ತಿದೆ ಎಂಬುವುದಾಗಿ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಹುಬೇಗ ನಾವು ಓಮಿಕ್ರಾನ್ ಇರುವುದನ್ನು ಪತ್ತೆ ಹಚ್ಚಿದ್ದೇವೆ. ವೈದ್ಯರಿಗೆ ಅತೀಯಾದ ಆಯಾಸ, ಸ್ವಲ್ಪ ಜ್ವರ, ನಿಃಶಕ್ತಿ ಕಾಣಿಸಿಕೊಂಡಿದೆ. ತಡಮಾಡದೆ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ, ಆದರೆ, ವರದಿ ಪಾಸಿಟಿವ್ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು 'ರಾಜ್ಯದ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಎರಡು ಡೋಸ್ ಲಸಿಕೆಗಳನ್ನು ಆದಷ್ಟು ಶೀಘ್ರದಲ್ಲಿ ತೆಗೆದುಕೊಳ್ಳಬೇಕು. ಆದಷ್ಟು ಗುಂಪು ಸೇರದೆ ಸಹಕರಿಸಬೇಕೆಂದು ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.