ನವದೆಹಲಿ, ನ. 02 (DaijiworldNews/HR): ಕರ್ನಾಟಕದಲ್ಲಿ ಇಬ್ಬರಿಗೆ ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಆತಂಕ ಪಡುವ ಅಗತ್ಯವಿಲ್ಲ, ಒಮಿಕ್ರಾನ್ ಅಪಾಯಕಾರಿ ವೈರಸ್ ಅಲ್ಲ" ಎಂದಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಮಾತನಾಡಿದ ಸಿಎಂ, ಒಮಿಕ್ರಾನ್ ತಡೆಗೆ ಈಗಾಗಲೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಜ್ಞರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಅಗತ್ಯಬಿದ್ದರೆ ಮಾರ್ಗಸೂಚಿ ಬದಲಿಸಲಾಗುವುದು" ಎಂದು ಹೇಳಿದರು.
ಇನ್ನುಒಮಿಕ್ರಾನ್ ಸೋಂಕಿತರ ಚಿಕಿತ್ಸೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಆದರೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು" ಎಂದು ಹೇಳಿದ್ದಾರೆ.