ನವದೆಹಲಿ, ನ. 02 (DaijiworldNews/HR): ಸಂಸತ್ತಿನ ಅಧಿವೇಶನದಲ್ಲಿ 12 ರಾಜ್ಯಸಭಾ ಸಂಸದರ ಅಮಾನತು ಕುರಿತು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿ ನಡುವೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಗುರುವಾರ ಪ್ರತಿಭಟನೆಯನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ, ಆದರೆ ನಾವು ಸಾಮಾನ್ಯ ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸುತ್ತೇವೆ" ಎಂದರು.
ಇನ್ನು ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾದಾಗಿನಿಂದ ಉಭಯ ಸದನಗಳ ಕಲಾಪದಲ್ಲಿ ನಿರಂತರ ಅಡಚಣೆ ಉಂಟಾಗಿದ್ದು, ಪ್ರತಿಪಕ್ಷಗಳನ್ನು ಕೆರಳಿಸಿದ ಮತ್ತು ತೀವ್ರ ವಾಗ್ವಾದಕ್ಕೆ ವೇದಿಕೆ ಕಲ್ಪಿಸಿದ ಕ್ರಮದಲ್ಲಿ, ಸರ್ಕಾರವು ತಂದ ನಿರ್ಣಯದ ನಂತರ ಸೋಮವಾರದ ಮೊದಲ ದಿನವೇ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಒಂದು ಡಜನ್ ಸದಸ್ಯರನ್ನು ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಸಿದ್ದರು.