ನವದೆಹಲಿ, ಡಿ.02 (DaijiworldNews/PY): ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಪ್ರತಿಪಕ್ಷ ನಾಯಕತ್ವದ ಬಗ್ಗೆ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದು, "ಕಾಂಗ್ರೆಸ್ಗೆ ಪ್ರತಿಪಕ್ಷ ನಾಯಕ ಸ್ಥಾನ ಕೇಳಲು ಅದೇನು ದೈವಿಕವಾಗಿ ಬಂದ ಹಕ್ಕಲ್ಲ" ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಕಾಂಗ್ರೆಸ್ ಪ್ರಬಲ ಪಕ್ಷಕ್ಕಾಗಿ ಹೆಚ್ಚೆಚ್ಚು ಬಿಂಬಿಸಿಕೊಳ್ಳುತ್ತಿದೆ. ಕಳೆದ 10 ವರ್ಷಗಳಲ್ಲಿ ಪಕ್ಷವು ಶೇ. 90ಕ್ಕಿಂತ ಹೆಚ್ಚು ಚುನಾವಣೆಗಳಲ್ಲಿ ಪಕ್ಷ ಸೋತಿರುವಾಗ ಕಾಂಗ್ರೆಸ್ನ ನಾಯಕತ್ವವು ದೈವಿಕ ಹಕ್ಕಲ್ಲ" ಎಂದು ತಿಳಿಸಿದ್ದಾರೆ.
"ಪ್ರತಿಪಕ್ಷ ನಾಯಕನ ಸ್ಥಾನ ಪ್ರಜಾಸತ್ತಾತ್ಮಕವಾಗಿ ತೀರ್ಮಾನವಾಗಬೇಕು" ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಯುಪಿಎ ಉಳಿದಿಲ್ಲ ಎಂದು ಹೇಳಿಕ ನೀಡಿದ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ.