ನವದೆಹಲಿ, ನ. 02 (DaijiworldNews/HR): ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಸಂಸತ್ನಲ್ಲಿ ಮಾಧ್ಯಮಗಳ ಮೇಲೆ ಹಾಕಿರುವ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.
ಪತ್ರಕರ್ತರ ಮೇಲೆ ಹಾಕಿರುವ ನಿರ್ಬಂಧ ತಕ್ಷಣವೇ ತೆಗೆದು ಹಾಕಬೇಕು. ಕೊರೊನಾದಿಂದಾಗಿ ಪ್ರೆಸ್ ಗ್ಯಾಲರಿಯಲ್ಲಿ ಪತ್ರಕರ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಇದು ತೀವ್ರ ದುಃಖ ಮತ್ತು ಆಘಾತಕಾರಿ ಸಂಗತಿ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ಸಂಸತ್ತಿನ ಪ್ರೆಸ್ ಗ್ಯಾಲರಿಯಲ್ಲಿ ಮಾಧ್ಯಮ ಪ್ರವೇಶ ನಿರ್ಬಂಧಿಸುವ ಮೋದಿ ಸರ್ಕಾರದ ಕ್ರಮ ಪತ್ರಕರ್ತರ ಗುಂಪು ಖಂಡಿಸಿದ್ದು, ಪ್ರತಿಭಟನೆ ಸಹ ನಡೆಸಿತ್ತು.
ಸಂಸತ್ತಿಗೆ ಅನಿರ್ಬಂಧಿತ ಪ್ರವೇಶದ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಸಂಸತ್ ಕಲಾಪ ವರದಿ ಮಾಡಿದ ಕೆಲವು ಪತ್ರಕರ್ತರು ಎಲ್ಲಾ ರಾಜಕೀಯ ಪಕ್ಷಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.