ಬೆಂಗಳೂರು, ನ. 02 (DaijiworldNews/HR): ಬಸ್ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಏರಿಕೆ ಮಾಡಿ ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಶಾಕ್ ನೀಡಿದ್ದು,ಪರಿಷ್ಕೃತ ದರ ಡಿ.10 ರಿಂದಲೇ ಜಾರಿಗೆ ಬರಲಿದೆ ಎಂದು ಸಾರಿಗೆ ಸಂಸ್ಥೆ ಘೋಷಿಸಿದೆ.
ಸಾಂದರ್ಭಿಕ ಚಿತ್ರ
ಲಗೇಜ್ ದರವನ್ನು ಪ್ರತಿ ಸ್ಟೇಜ್ ಆಧಾರದ ಮೇಲೆ ಪರಿಷ್ಕರಣೆ ಮಾಡಲಾಗಿದ್ದು, ಶೇ.10ರಷ್ಟು ದರ ಏರಿಕೆ ಮಾಡಲಾಗಿದೆ. ಒಂದರಿಂದ 10 ನೇ ಸ್ಟೇಜ್ವರೆಗಿನ ಲಗೇಜ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 11 ರಿಂದ 15ನೆ ಹಂತಕ್ಕೆ ಈ ಹಿಂದೆ ಇದ್ದ 14 ರೂ.ದರವನ್ನು 17 ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಇನ್ನು 16 ರಿಂದ 20 ನೇ ಹಂತದ ದರವನ್ನು 18 ರಿಂದ 21, 21 ರಿಂದ 25 ನೆ ಹಂತಕ್ಕೆ 21 ರಿಂದ 24 ರೂ.ಗಳಿಗೆ, 26 ರಿಂದ 30ನೇ ಹಂತಕ್ಕೆ 25 ರಿಂದ 28, 31 ರಿಂದ 35ನೇ ಹಂತಕ್ಕೆ 29ರಿಂದ 32, 36ರಿಂದ 40ನೇ ಹಂತಕ್ಕೆ 33 ರಿಂದ 36, 41 ರಿಂದ 45ನೇ ಹಂತಕ್ಕೆ 36 ರಿಂದ 39, 46 ರಿಂದ 50ನೇ ಹಂತಕ್ಕೆ 40 ರಿಂದ 43, 51 ರಿಂದ 55ನೇ ಹಂತಕ್ಕೆ 44 ರಿಂದ 47, 56ರಿಂದ 60ನೇ ಹಂತಕ್ಕೆ 48 ರಿಂದ 51, 61 ರಿಂದ 65ನೇ ಹಂತಕ್ಕೆ 51 ರಿಂದ 54ಕ್ಕೆ ಹಾಗೂ 66ರಿಂದ 70ನೇ ಹಂತಕ್ಕೆ 55 ರೂಗಳಿಂದ 58 ರೂ.ಗಳಿಗೆ ದರ ಏರಿಕೆ ಮಾಡಲಾಗಿದೆ ಎಮ್ದು ತಿಳಿದು ಬಂದಿದೆ.
ಲಗೇಜ್ ದರವನ್ನು ಸಂಸ್ಥೆ ನಷ್ಟದ ಹಾದಿಯಲ್ಲಿರುವುದರಿಂದ ಪರಿಷ್ಕರಣೆ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ಸಬೂಬು ಹೇಳಿದೆ.