ಬೋಪಾಲ್, ಡಿ 02 (DaijiworldNews/MS): ಮಧ್ಯಪ್ರದೇಶದಲ್ಲಿ ವಿಶೇಷ ಪ್ರಕರಣವೊಂದರಲ್ಲಿ ಮಹಿಳೆಯಾಗಿ ಕಾನ್ಸ್ಟೆಬಲ್ ಹುದ್ದೆಯನ್ನು ಸೇರಿದ್ದಾಕೆ ಪುರುಷನಾಗಿ ಲಿಂಗಪರಿವರ್ತನೆ ಆಗಲು ಗೃಹ ಇಲಾಖೆ ಇದಕ್ಕೆ ಸಮ್ಮತಿ ಸೂಚಿಸಿದೆ.
ಮಹಾರಾಷ್ಟ್ರದ ಬೀಡ್ನ ಮಹಿಳಾ ಕಾನ್ಸ್ಟೆಬಲ್ ಲಲಿತಾ ಸಾಳ್ವೆ ಅವರು ತನ್ನ ದೇಹದಲ್ಲಾಗುತ್ತಿರುವ ಪರಿವರ್ತನೆಯನ್ನು ನೋಡಿ ತಾನು ಮಹಿಳೆಯಲ್ಲ, ಪುರುಷ ಎಂಬುದು ಅರಿವಾಗಿದೆ. ಹೀಗಾಗಿ ಅಗತ್ಯ ಮಾನಸಿಕ ಮತ್ತು ದೈಹಿಕ ಪರೀಕ್ಷೆಗಳನ್ನು ಪಡೆದ ನಂತರ 2019 ರಲ್ಲಿ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಅರ್ಜಿ ಸಲ್ಲಿಸಿದ್ದರು.
ಬೆಳವಣಿಗೆಯನ್ನು ಖಚಿತಪಡಿಸಿದ ರಾಜ್ಯದ ಗೃಹ ಸಚಿವ ನರೋತ್ತಮ್ ಮಿಶ್ರಾ, ಕಾನ್ಸ್ಟೆಬಲ್ ಅವರಿಗೆ ಗ್ವಾಲಿಯರ್ ಮತ್ತು ದೆಹಲಿಯ ಹಲವಾರು ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಿದ್ದಾರೆ ಇದು ಮಧ್ಯಪ್ರದೇಶದಲ್ಲಿ ಮೊದಲ ಪ್ರಕರಣವಾಗಿದೆ. ರಾಜ್ಯ ಸರ್ಕಾರವು ಆಕೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅನುಮತಿ ನೀಡಿದ." ಲಿಂಗ ಬದಲಾವಣೆ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಮತ್ತು ಅದಕ್ಕೆ ಅನುಮತಿಯನ್ನು ಕಾನ್ಸ್ಟೆಬಲ್ಗೆ ನೀಡಲಾಗಿದೆ" ಎಂದು ಅವರು ಹೇಳಿದ್ದಾರೆ.
ಮಹಿಳಾ ಕಾನ್ಸ್ಟೆಬಲ್ಗೆ ಬಾಲ್ಯದಿಂದಲೂ ತಮ್ಮ ಲಿಂಗ ಗುರುತಿನ ಬಗ್ಗೆ ಗೊಂದಲವಿತ್ತು. ಆದರೆ ಹೆಣ್ಣಾಗಿಯೇ ಕಾನ್ಸ್ಟೆಬಲ್ ಹುದ್ದೆಗೆ ಬಂದಿದ್ದರು. ನಂತರ ತಮ್ಮ ದೇಹದಲ್ಲಾಗುತ್ತಿರುವ ಬದಲಾವಣೆ ಗಮನಿಸಿ 2019 ರಲ್ಲಿ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು ಇಲಾಖೆ ಇದನ್ನು ಗೃಹ ಇಲಾಖೆಗೆ ರವಾನೆ ಮಾಡಿತ್ತು. ಕಾನ್ಸ್ಟೆಬಲ್ಗೆ ಶಸ್ತ್ರಚಿಕಿತ್ಸೆಯ ನಂತರ ತಮ್ಮ ಹೆಸರನ್ನು ಲಲಿತ್ ಎಂದು ಬದಲಾಯಿಸಿಕೊಳ್ಳಲಿದ್ದಾರೆ.