ಮೈಸೂರು, ನ. 02 (DaijiworldNews/HR): ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಎರಡು ಮದುವೆಯಾಗಿ ಇಬ್ಬರೂ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆ ಮಾಡಿರುವ ಆರೋಪಿಯನ್ನು ಈರಯ್ಯ ಎಂದು ಗುರುತಿಸಲಾಗಿದೆ.
ಈತ ಈ ಮೊದಲು ಒಂದು ಮದುವೆಯಾಗಿದ್ದು, ಆಕೆಯ ಜತೆ ಜಗಳವಾಗಿ ಕೊಲೆ ಮಾಡಿದ್ದ. ಈ ಕೃತ್ಯಕ್ಕೆ ಈರಯ್ಯನಿಗೆ ಜೈಲು ಶಿಕ್ಷೆಯಾಗಿ ಜೈಲಿನಿಂದ ಹೊರಬಂದು ಮಹದೇವಮ್ಮ ಎಂಬಾಕೆ ಜತೆ ಮದುವೆಯಾಗಿದ್ದು, ಆಕೆ ಗರ್ಭಿಣಿಯಾಗಿದ್ದಳು.
ಇನ್ನು ಆಕೆಯೊಂದಿಗೂ ಜಗಳವಾಡಿ ಆಕೆಯನ್ನೂ ಕೊಂದಿದ್ದು, ತಡೆಯಲು ಬಂದ ನಾಲ್ಕು ಜನರ ಮೇಲೂ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದು ಈತನ ಕೃತ್ಯಕ್ಕೆ ಪತ್ನಿ ಮಹದೇವಮ್ಮ ಸೇರಿದಂತೆ ಎದುರು ಮನೆಯ ನಿಂಗಮ್ಮ(50) ಮತ್ತು ಮಾದಯ್ಯ(60) ಕೊಲೆಯಾಗಿದ್ದಾರೆ.
ದಾಳಿಗೆ ಒಳಗಾಗಿರುವ ನಿಂಗಮ್ಮ ತಂದೆ, ತಾಯಿ ಹಾಗೂ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ.