ನವದೆಹಲಿ, ನ. 02 (DaijiworldNews/HR): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಯನ್ನು ಮೊದಲಿಗೆ ಕುಳಿತೇ ಹಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ದೂರು ನೀಡಿದೆ.
ರಾಷ್ಟ್ರಗೀತೆಯನ್ನು ಮೊದಲಿಗೆ ಕುಳಿತೇ ಹಾಡಿದ್ದು, ಆ ಮೂಲಕ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ದೂರು ನೀಡಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ದೂರಿನ ಪ್ರತಿಯನ್ನು ಹಾಕಿ ಪೋಸ್ಟ್ ಮಾಡಿರುವಂತ ಬಿಜೆಪಿಯ ಅಡ್ವಕೇಟ್ ವಿವೇಕಾನಂದ ಗುಪ್ತ, "ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಕುಳಿತುಕೊಂಡೇ ಮೊದಲು ಹಾಡೋದಕ್ಕೆ ಪ್ರಾರಂಭಿಸಿದ್ದಾರೆ. ನಂತರ ಸ್ವಲ್ಪ ಹೊತ್ತು ಎದ್ದು ನಿಂತು ಹಾಡಿದ್ದಾರೆ. ರಾಷ್ಟ್ರಗೀತೆ ಪೂರ್ಣವಾಗೋ ಮೊದಲೇ ಕುಳಿತು ಹಾಡಿದ್ದಾರೆ. ಈ ಮೂಲಕ ರಾಷ್ಟ್ರಗೀತೆಗೆ ಅವಮಾನ ತೋರಿದ್ದಾರೆ. ಮಮತಾ ಬ್ಯಾನರ್ಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುಬೇಕು" ಎಂದು ಪೊಲೀಸರಿಗೆ ದೂರಿನಲ್ಲಿ ಆಗ್ರಹಿಸಿದ್ದಾರೆ.