ಅಹಮದಾಬಾದ್, ಡಿ 02 (DaijiworldNews/MS): ಗುಜರಾತ್ನ ಗಿರ್ ಸೋಮನಾಥ್ ಜಿಲ್ಲೆಯ ಬಳಿ ದೋಣಿಗಳು ಮಗುಚಿಬಿದ್ದ ಪರಿಣಾಮ ಕನಿಷ್ಠ 10 ಮೀನುಗಾರರು ನಾಪತ್ತೆಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಮೂಲಗಳ ಪ್ರಕಾರ, 10 ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ಕನಿಷ್ಠ 10-12 ದೋಣಿಗಳು ಹೆಚ್ಚಿನ ಗಾಳಿಯ ವೇಗ ಮತ್ತು ಭಾರೀ ಮಳೆಯಿಂದಾಗಿ ಮಗುಚಿ ಬಿದ್ದಿವೆ.
ಮೀನುಗಾರರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ನಲ್ಲಿ ನಿನ್ನೆಯಿಂದ ಒಂದೇ ಸಮನೆ ಮಳೆಯಾಗುತ್ತಿದೆ. ಅದರಲ್ಲೂ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರಗಳ ಸುಮಾರು 108 ತಾಲೂಕುಗಳಲ್ಲಿ ಭರ್ಜರಿ ಮಳೆ ಬೀಳುತ್ತಿದೆ.
ಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಗುಜರಾತ್ನಲ್ಲಿ ಡಿ.1 ಮತ್ತು 2ರಂದು ಭಾರಿ ಮಳೆ ಬೀಳುವ ಎಚ್ಚರಿಕೆ ನೀಡಿದ್ದ ಐಎಂಡಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹೇಳಿತ್ತು.