ನವದೆಹಲಿ, ಡಿ 01 (DaijiworldNews/MS): ಕೊರೊನಾ ರೂಪಾಂತರಿ 'ಓಮಿಕ್ರಾನ್' ತಳಿ ಜಗತ್ತಿನಾದ್ಯಂತ ಹರಡುವ ಭೀತಿಯಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 15 ರಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳ ಪುನರಾರಂಭವನ್ನು ಮುಂದೂಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ನಿರ್ಧರಿಸಿದೆ.
ಇದಕ್ಕೂ ಮುಂಚೆ ಡಿ.೧೫ ರಿಂದ ಅಂತಾರಾಷ್ಟ್ರೀಯ ವಿಮಾನಗಳ ಪುನರಾರಂಭ ಮಾಡಲು ಡಿಜಿಸಿಎ ನಿರ್ಧರಿಸಿತ್ತು.
ಹೊಸ ರೂಪಾಂತರಿಯ ಒಮಿಕ್ರಾನ್ ಜಾಗತಿಕ ಭೀತಿ ಸೃಷ್ಟಿಸಿದ್ದು , ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಮತ್ತು ನಿಗದಿತ ವಾಣಿಜ್ಯ ಅಂತಾರಾಷ್ಟ್ರೀಯ ಪ್ರಯಾಣಿಕರ ಸೇವೆಗಳ ಪುನರಾರಂಭದ ದಿನಾಂಕವನ್ನು ಮುಂದೂಡಲಾಗಿದೆ. ಮತ್ತೆ ಪುನರಾರಂಭಿಸುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ನಂತರ ಮಾರ್ಚ್ 2020ರಿಂದ ಭಾರತಕ್ಕೆ ಮತ್ತು ಭಾರತದಿಂದ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ಸ್ಥಗಿತಗೊಳಿಸಿತ್ತು
ಇಲ್ಲಿಯವರೆಗೆ ಸುಮಾರು ೧೩ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.ಈ ಹಿನ್ನಲೆಯಲ್ಲಿ ಜಾಗತಿಕವಾಗಿ ವಿಮಾನ ಸಂಚಾರ ನಿರ್ಬಂಧ ಜಾರಿಯಾಗತೊಡಗಿದೆ.