ಬೆಳಗಾವಿ, ಡಿ. 01 (DaijiworldNews/HR): "ಬಿಜೆಪಿ ವರಿಷ್ಠರ ಆಶೀರ್ವಾದ ಮತ್ತು ಬೆಂಬಲ ನನಗೆ ಇದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ನನ್ನನ್ನು ಮುಗಿಸಿ ಬಿಡುತ್ತಿದ್ದರು" ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರ ಆಶೀರ್ವಾದ ನನಗೆ ಇದೆ. ಹೀಗಾಗಿ ನಾನು ಧೈರ್ಯವಾಗಿ ಇದ್ದೇನೆ. ಇಲ್ಲದಿದ್ದರೆ ನನ್ನನ್ನು ಮುಗಿಸಿ ಬಿಡುತ್ತಿದ್ದರು" ಎಂದರು.
ಡಿ.ಕೆ.ಶಿವಕುಮಾರ ಅವರು ತಮ್ಮ ಬಗ್ಗೆ ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಈಗ ಯಾವುದೇ ಉತ್ತರ ಕೊಡುವದಿಲ್ಲ. ಡಿಸೆಂಬರ್ 14 ರಂದು ಎಲ್ಲ ವಿವರ ನೀಡುತ್ತೇನೆ. 1985 ರಿಂದ ಹಿಡಿದು ಇಲ್ಲಿಯವರೆಗೆ ನಾನು ಮತ್ತು ನಮ್ಮ ಕುಟುಂಬ ಹಾಗೂ ಶಿವಕುಮಾರ ಮತ್ತು ಅವರ ಕುಟುಂಬ ಹೇಗಿತ್ತು ಎಂಬುದರ ಬಗ್ಗೆ ವಿವರವಾಗಿ ಹೇಳುತ್ತೇನೆ" ಎಂದಿದ್ದಾರೆ.