ಚಿಕ್ಕಮಗಳೂರು, ಡಿ. 01 (DaijiworldNews/HR): ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಲು ನೈತಿಕತೆ ಏನಿದೆ? ನಾವು ಶ್ರೀರಾಮಚಂದ್ರನ ಮೊಮ್ಮಕ್ಕಳು ಎಂದು ಹೇಳಿಕೊಳ್ಳಲು ಬಿಜೆಪಿ ಯವರಿಗೆ ನಾಚಿಕೆಯಾಗಲ್ವಾ? ಎಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೊದಲ ಬಾರಿ ಗೆದ್ದಾಗ ಮೂರು ಮುಖ್ಯಮಂತ್ರಿಯಾದರು, ಮೂರು ಪಕ್ಷಗಳಾಗಿ ವಿಭಜನೆಯಾಯ್ತು. ಈ ಮುಖ್ಯಮಂತ್ರಿಯೂ ಬದಲಾಗುತ್ತಾರೆಂಬ ಮುನ್ಸೂಚನೆಯನ್ನು ಈಶ್ವರಪ್ಪ ಹೇಳಿದ್ದಾರೆ. ಇದು ಈಶ್ವರಪ್ಪ ಬಾಯಲ್ಲಿ ಬಂದ ಮಾತಲ್ಲ, ವರಿಷ್ಠರ ಬಾಯಿಂದ ಬಂದಿರುವ ಮಾತು" ಎಂದಿದ್ದಾರೆ.
ಇನ್ನು ಬಿಜೆಪಿಯಲ್ಲಿ ಎರಡನೇ ಮುಖ್ಯಮಂತ್ರಿಯೂ ಬದಲಾವಣೆ ಆಗುತ್ತಾರೆ. ಈಶ್ವರಪ್ಪ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಈಶ್ವರಪ್ಪನವರೇ ವರ್ಷವಾದರೂ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಯಾಕೆ ಮಾಡಿಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.