ಬರೇಲಿ, ಡಿ. 01 (DaijiworldNews/HR): ಉತ್ತರ ಪ್ರದೇಶದ ಬರಾದರಿ ಪ್ರದೇಶದಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ವಕೀಲನೊಬ್ಬನನ್ನ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಈ ಕುರಿತು ಎಸ್ಎಸ್ಪಿ ರೋಹಿತ್ ಸಿಂಗ್ ಸಜ್ವಾನ್ ಮಾಹಿತಿ ನೀಡಿದ್ದು, "ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ವಕೀಲ ಗೋವಿಂದ್ ಅಲ್ಲಿಗೆ ಬಂದು ಬಾಲಕಿಯನ್ನು ತನ್ನ ಕಚೇರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ" ಎಂದು ಹೇಳಿದ್ದಾರೆ.
ಇನ್ನು ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಕೀಲ ಬಾಲಕಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಘಟನೆ ಬಳಿಕ ಬಾಲಕಿ ಮನೆಗೆ ತಲುಪಿ ತನ್ನ ಮೇಲಾಗಿರುವ ದೌರ್ಜನ್ಯದ ಕುರಿತು ಚಿಕ್ಕಮ್ಮನಿಗೆ ತಿಳಿಸಿದ್ದು, ಬಳಿಕ ಆಕೆಯ ತಂದೆ ಬಾರಾದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.