ನವದೆಹಲಿ, ಡಿ. 01 (DaijiworldNews/HR): ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲಿ ಮತ್ತೆ 100 ರೂ ದರ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಡಿಸೆಂಬರ್ 1, 2021ರಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಮತ್ತೆ ಹೆಚ್ಚಿಸಲಾಗಿದ್ದು, ಪ್ರತೀ 19 ಕೆ.ಜಿಯ ವಾಣಿಜ್ಯ ಸಿಲಿಂಡರ್ನ ಬೆಲೆಯನ್ನು ತಲಾ 100 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಇನ್ನು ಬೆಲೆ ಹೆಚ್ಚಳದ ಬಳಿಕ 19 ಕೆ.ಜಿಯ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ 2101 ರೂಪಾಯಿ, ಮುಂಬೈನಲ್ಲಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ನ ಬೆಲೆ 2,051 ರೂ., ಕೋಲ್ಕತ್ತಾದಲ್ಲಿ 2,174.50 ರೂ., ಚೆನ್ನೈನಲ್ಲಿ ಎಲ್ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,234.50 ಆಗಿದೆ.
ನವೆಂಬರ್ 1ರಂದು ಎಲ್ಪಿಜಿ ವಾಣಿಜ್ಯ ಸಿಲಿಂಡರ್ನ ಬೆಲೆಯನ್ನು 266 ರೂಪಾಯಿಯಿಂದ 2000.50 ರೂ.ಗೆ ಹೆಚ್ಚಿಸಲಾಗಿದ್ದು, ನವೆಂಬರ್ 1ರ ಹೆಚ್ಚಳಕ್ಕೆ ಮೊದಲು, ದೆಹಲಿಯಲ್ಲಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆ 1734 ರೂಪಾಯಿಯಿತ್ತು. ಆದರೆ, ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.
ಇನ್ನು ನವೆಂಬರ್ 1ರಂದು ಬೆಲೆ ಏರಿಕೆ ಮಾಡಿದ ನಂತರ ಇದು ಎರಡನೇ ಹೆಚ್ಚಳವಾಗಿದೆ.