ಹುಬ್ಬಳ್ಳಿ, ಡಿ. 01 (DaijiworldNews/HR): ಹುಬ್ಬಳ್ಳಿಯ ಹೋಟೆಲ್ ವೊಂದರಲ್ಲಿ ವಿಧಾನ ಪರಿಷತ್ ಚುನಾವಣೆಗಾಗಿ ನಡೆದ ಬಿಜೆಪಿ ಸಭೆಯಲ್ಲಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸೇರಿದಂತೆ ಹಲವು ನಾಯಕರ ಸಮ್ಮುಖದಲ್ಲೇ ಹಾವೇರಿ ಜಿಲ್ಲೆಯ ಶಾಸಕರಿಬ್ಬರು ಕೈ- ಕೈ ಮಿಲಾಯಿಸಿರುವ ಘಟನೆ ನಡೆದಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ಶಾಸಕ ಅರುಣ ಕುಮಾರ, ವಿಧಾನ ಪರಿಷತ್ತು ಸದಸ್ಯ, ಮಾಜಿ ಸಚಿವ ಆರ್. ಶಂಕರ್ ನಡುವೆ ಚುನಾವಣೆ ಉಸ್ತುವಾರಿ ವಿಚಾರವಾಗಿ ಗಲಾಟೆಯಾಗಿದೆ.
ಇನ್ನು ಶಂಕರ ವಿರುದ್ದ ತೀವ್ರ ಗರಂ ಆಗಿದ್ದ ಅರುಣ ಕುಮಾರ ಅವರನ್ನು ಬಿಜೆಪಿಯ ಕೆಲವರು ಸಮಾಧಾನ ಪಡಿಸಲು ಯತ್ನಿಸಿದ್ದು, ಕೆಲವರು ಶಂಕರ ಅವರನ್ನು ಹೊಟೇಲ್ ನಿಂದ ಹೊರ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.