ನವದೆಹಲಿ, ನ. 30 (DaijiworldNews/HR): ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ಅವರು ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದು, ಟ್ವಿಟರ್ನ ಪ್ರಸ್ತುತ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಭಾರತೀಯ ಪರಾಗ್ ಅಗರವಾಲ್ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.
ಜ್ಯಾಕ್ ಡಾರ್ಸೆ ಅವರು ಕಳೆದ 16 ವರ್ಷಗಳಿಂದ ಟ್ವಿಟರ್ ನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಸ್ಕ್ವೇರ್ ಐಎನ್ಸಿ ಕಡೆಗೆ ಅಧಿಕ ಗಮನ ನೀಡುತ್ತಿದ್ದಾರೆ, ಟ್ವಿಟರ್ ಕಡೆಗೆ ಗಮನಹರಿಸುತ್ತಿಲ್ಲ ಎಂದು ಟ್ವಿಟರ್ನ ಪಾಲುದಾರ ಸಂಸ್ಥೆ ಎಲಿಯಟ್ ಮ್ಯಾನೇಜ್ಮೆಂಟ್ ಕಾರ್ಪ್ ಆರೋಪ ಮಾಡಿ ಸಿಇಒ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು ಒತ್ತಾಯಿಸಿತ್ತು.
ಇನ್ನು ಡಾರ್ಸೆ ಅವರು ಸೋಮವಾರ ಸಿಇಒ ಹುದ್ದೆಗೆ ರಾಜೀನಾಮೆ ನೀಡಿರುವಿದಾಗಿ ತಮ್ಮ ಟ್ವೀಟರ್ ಮೂಲಕ ತಿಳಿಸಿದ್ದಾರೆ.