ನವದೆಹಲಿ, ನ. 30 (DaijiworldNews/HR): ಬಿಟ್ಕಾಯಿನ್ ಹಾಗೂ ಕ್ರಿಪ್ಟೋ ಕರೆನ್ಸಿಗಳ ಜಾಹಿರಾತು ನಿಷೇಧದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಕುರಿತು ರಾಜ್ಯಸಭೆಯಲ್ಲಿಂದು ಮಾತನಾಡಿದ ಅವರು, ಬಿಟ್ಕಾಯಿನ್ ಹಾಗೂ ಕ್ರಿಪ್ಟೋ ಕರೆನ್ಸಿಗಳು ಅತ್ಯಂತ ಅಪಾಯಕಾರಿ ಕ್ಷೇತ್ರ, ಸಂಪೂರ್ಣ ಕ್ರಮಬದ್ದವಾದ ಚೌಕಟ್ಟು ರೂಪಿಸಲಾಗಿಲ್ಲ" ಎಂದರು.
ಇನ್ನು ಈ ಜಾಹಿರಾತುಗಳನ್ನು ನಿಷೇಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಬದಲಾಗಿ ಜನಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಕ್ರಿಪ್ಟೋ ಕರೆನ್ಸಿಗೆ ಸಂಬಂಧಪಟ್ಟಂತೆ ಶೀಘ್ರವೇ ಕಾನೂನನ್ನು ಸಂಸತ್ನಲ್ಲಿ ಮಂಡಿಸುವುದಾಗಿ ಎಂದು ತಿಳಿಸಿದ್ದಾರೆ.