ಮೈಸೂರು,ನ. 30 (DaijiworldNews/HR): ಜಿ.ಟಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ಇಬ್ಬರೂ ಒಂದು ರೀತಿ ಲವ್ ಬರ್ಡ್ಸ್ ತರಹ. ಇಬ್ಬರಿಗೂ ಯಾವಾಗ ಲವ್ ಆಗುತ್ತದೆ, ಯಾವಾಗ ಡಿವೋರ್ಸ್ ಆಗುತ್ತದೆ ಎಂದು ಅವರಿಗೇ ಗೊತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ಟಿ ಸೋಮಶೇಖರ್ ಹೇಳಿದ್ದಾರೆ.
ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಅವರ ಒಡನಾಟದ ಕುರಿತು ಮಾತನಾಡಿದ ಅವರು, ಅವರಿಬ್ಬರು ಒಂದು ರೀತಿ ಲವ್ ಬರ್ಡ್ಸ್ ತರಹ. ಇಬ್ಬರಿಗೂ ಯಾವಾಗ ಲವ್ ಆಗುತ್ತದೆ, ಯಾವಾಗ ಡಿವೋರ್ಸ್ ಆಗುತ್ತದೆ ಎಂದು ಅವರಿಗೇ ಗೊತ್ತು ಎಂದಿದ್ದಾರೆ.
ಇನ್ನು ಮುಖ್ಯಮಂತ್ರಿ ಆಗಲಿ ಎಂದು ಸಿದ್ದರಾಮಯ್ಯ ಪೂಜೆ ಮಾಡಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಪೂಜೆ ಮಾಡಿದ ತಕ್ಷಣ ಮುಖ್ಯಮಂತ್ರಿಯಾಗಲ್ಲ. ಪೂಜೆ ಮಾಡಿ ಮುಖ್ಯಮಂತ್ರಿ ಆಗುವ ಹಾಗಿದ್ದರೆ ಎಲ್ಲರೂ ಪೂಜೆ ಮಾಡಿಸುತ್ತಿದ್ದರು. ದೇವಸ್ಥಾನ ಪೂಜೆಗೆ ಅಹ್ವಾನ ನೀಡಿದ್ದಾರೆ, ಹೀಗಾಗಿ ಅವರು ಜೊತೆಯಾಗಿ ಹೋಗಿದ್ದಾರೆ ಅಷ್ಟೇ" ಎಂದರು.