ಕಲಬುರ್ಗಿ, ನ. 30 (DaijiworldNews/HR): ಸಿದ್ದರಾಮಯ್ಯ ಒಬ್ಬ ಮೋಸಗಾರ, ಅವರ ರಕ್ತದ ಕಣ ಕಣದಲ್ಲೂ ಮೋಸವೇ ತುಂಬಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೊಬ್ಬ ಭಯೋತ್ಪಾದಕ ಎಂದ ಸಿದ್ಧರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಅವರು, "ಸಿದ್ದರಾಮಯ್ಯ ಯಾವಾಗ ಕುಡಿತಾರೋ, ಯಾವಾಗ ಕುಡಿಯೋದಿಲ್ಲವೋ ಒಂದು ಗೊತ್ತಾಗೋಲ್ಲ. ಕುಡಿದಾಗ ಒಂದು ಮಾತು, ಕುಡಿದೇ ಇದ್ದಾಗ ಒಂದು ಮಾತನಾಡ್ತಾರೆ. ಸಿದ್ಧರಾಮಯ್ಯ ಒಬ್ಬ ದೊಡ್ಡ ಕುಡುಕ" ಎಂದರು.
ಇನ್ನು ಸಿದ್ದರಾಮಯ್ಯ ಒಬ್ಬ ಮೋಸಗಾರ, ಅವರ ರಕ್ತದ ಕಣ ಕಣದಲ್ಲೂ ಮೋಸವೇ ತುಂಬಿದ್ದು, ಮೊದಲು ಜೆಡಿಎಸ್ ಗೆ ಆನಂತ್ರ ಶ್ರೀನಿವಾಸ್ ಪ್ರಸಾದ್ ಗೆ, ಈಗ ಕಾಂಗ್ರೆಸ್ ಗೂ ಮೋಸ ಮಾಡ್ತಾ ಇದ್ದಾರೆ" ಎಂದು ಆರೋಪಿಸಿದ್ದಾರೆ.