ನವದೆಹಲಿ, ನ 29 (DaijiworldNews/MS): ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚೆ ಆರು ಮಹಿಳಾ ಸಂಸದರೊಂದಿಗೆ ಇರುವ ಸೆಲ್ಫಿಯನ್ನು ಟ್ವೀಟ್ ಮಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅದಕ್ಕೆ ನೀಡಿದ ವಿವರಣೆಯಿಂದ ಹಲವರ ಟೀಕೆಗೆ ಗುರಿಯಾಗಿದ್ದರೆ . ಹೀಗಾಗಿ ತಮ್ಮ ಟ್ವೀಟ್ಗೆ ಬಳಿಕ ಕ್ಷಮೆಯಾಚಿಸಿದ್ದಾರೆ.
ಸೋಮವಾರ ಸಂಸತ್ ಭವನದಲ್ಲಿ ಆರು ಮಂದಿ ಮಹಿಳಾ ಸಂಸದರೊಂದಿಗೆ ಸೆಲ್ಫಿ ತೆಗೆದುಕೊಂಡ ಶಶಿ ತರೂರ್ ಅವರು ಅದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.
ಕೆಲಸ ಮಾಡಲು ಸಂಸತ್ತು ಆಕರ್ಷಕ ಸ್ಥಳವಲ್ಲ ಎಂದು ಹೇಳಿದವರು ಯಾರು? ಎಂದು ಬರೆದುಕೊಂಡಿದ್ದರು. ಸಂಸತ್ನ ಆರು ಮಂದಿ ಮಹಿಳಾ ಸದಸ್ಯರಾದ ಸಂಸದೆ ಸುಪ್ರಿಯಾ ಸುಳೆ, ಪ್ರನೀತ್ ಕೌರ್, ತಮಿಳ್ಸಾಚಿ, ಮಿಮಿ ಚಕ್ರವರ್ತಿ, ನುಸ್ರತ್ ಜಯಾನ್ ರೂಹಿ, ಜ್ಯೋತಿ ಮಣಿ ಅವರೊಂದಿಗೆ ಇಂದು ಬೆಳಗ್ಗೆ ತೆಗೆಸಿಕೊಂಡ ಚಿತ್ರವಿದು ಎಂದು ಅವರು ಚಿತ್ರದೊಂದಿಗೆ ವಿವರಣೆ ನೀಡಿದ್ದರು.
ಲೋಕಸಭೆಯಲ್ಲಿರುವ ಮಹಿಳೆಯರು ನಿಮ್ಮ ಕಾರ್ಯಕ್ಷೇತ್ರವನ್ನು ಆಕರ್ಷಕವಾಗಿಸುವ ಅಲಂಕಾರಿಕ ವಸ್ತುಗಳಲ್ಲ. ಅವರು ಸಂಸದರು. ನೀವುಅಗೌರವ ತೋರಬಾರದು ಎಂದು ಟ್ವಿಟರ್ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವರು ನಕಾರಾತ್ಮವಾಗಿ ಕಾಮೆಂಟ್ ಮಾಡಿದ್ದರಿಂದ ಇನ್ನೊಂದು ಟ್ವೀಟ್ನಲ್ಲಿ ಶಶಿ ತರೂರ್ ಕ್ಷಮೆಯಾಚಿಸಿದ್ದಾರೆ.