ನವದೆಹಲಿ, ನ.29 (DaijiworldNews/PY): "ಇಂದು ಸಂಸತ್ತಿನಲ್ಲಿ ರೈತರ ಹೆಸರಿನಲ್ಲಿ ಸೂರ್ಯೋದಯವಾಗಬೇಕು" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ಧಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಂದು ರೈತರ ಹೆಸರಿನಲ್ಲಿ ಸಂಸತ್ತಿನಲ್ಲಿ ಸೂರ್ಯೋದಯವಾಗಬೇಕು. ಸಂಸತ್ ಅಧಿವೇಶನದ ಮೊದಲ ದಿನವೇ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ರದ್ಧತಿ ಬಗ್ಗೆ ಚರ್ಚೆಯಾಗಬೇಕು" ಎಂದಿದ್ದಾರೆ.
ಇಂದಿನಿಂದ 17ನೇ ಲೋಕಸಭೆಯ ಏಳನೇ ಅಧಿವೇಶನವು ನಡೆಯಲಿದೆ.
ಸಂಸತ್ತಿನಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವ ಮಸೂದೆಯನ್ನು ಮಂಡನೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಸಂಸತ್ ಅವೇಶನದ ಮೊದಲ ದಿನವೇ ವಿವಾದಿತ ಕೃಷಿ ಕಾನೂನುಗಳು ರದ್ದಾಗಬೇಕು, ರೈತರ ಕಾನೂನು ಬದ್ಧವಾಗಿಸಬೇಕು ಎಂದು ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಆಗ್ರಹಿಸುತ್ತಿವೆ.