ಬೆಂಗಳೂರು, ನ.29 (DaijiworldNews/PY): "ರಾಜ್ಯದಲ್ಲಿ ಯಾವುದೇ ರೀತಿಯ ಲಾಕ್ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಲಾಕ್ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ" ಎಂದು ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಲಾಕ್ಡೌನ್ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಲಾಕ್ಡೌನ್ ಬಗ್ಗೆ ವದಂತಿ ಹಬ್ಬಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
"ಸರ್ಕಾರ ಹೇಳುವ ತನಕ ಜನತೆ ಗೊಂದಲಕ್ಕೊಳಗಾಗಬಾರದು. ಲಾಕ್ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
"ಲಾಕ್ಡೌನ್ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿತ್ತು. ಲಾಕ್ಡೌನ್ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದ ಬಳಿಕ ಜನರು ನಂಬಬೇಕು. ಸದ್ಯಕ್ಕೆ ಲಾಕ್ಡೌನ್ ಬಗ್ಗೆ ರಾಜ್ಯ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ" ಎಂದಿದ್ದಾರೆ
"ನಾಳೆ ಬೆಳಗ್ಗೆ 10 ಗಂಟೆಗೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ತಾಂತ್ರಿಕಾ ಸಲಹಾ ಸಮಿತಿಯನ್ನೂ ಸಭೆಗೆ ಆಹ್ವಾನಿಸಲಾಗಿದೆ. ಓಮ್ರಿಕಾನ್, ಜಿನೋಮಿಕ್ ಸೀಕ್ವೇನ್ ಪತ್ತೆಯಾದ ಮೇಲೆ ಸರಿಯಾದ ಮಾಹಿತಿ ಸಿಗಲಿದೆ" ಎಂದು ತಿಳಿಸಿದ್ದಾರೆ.
"12 ದೇಶಗಳಲ್ಲಿ ಓಮ್ರಿಕಾನ್ ವೈರಸ್ ಪತ್ತೆಯಾಗಿದ್ದು, 12 ದೇಶಗಳಿಂದ ಬಂದವರ ಮೇಲೆ ನಿಗಾ ವಹಿಸಲಾಗಿದೆ. ಆಫ್ರಿಕನ್ ದೇಶಗಳಲ್ಲಿ ರಾಜ್ಯಕ್ಕೆ ಬಂದವರ ಮೇಲೆ ನಿಗಾವಹಿಸಲಾಗಿದೆ. ಓಮ್ರಿಕಾನ್ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ಆದರೆ, ಇದು ಅಷ್ಟೊಂದು ಗಂಭೀರವಾಗಿಲ್ಲ" ಎಂದಿದ್ದಾರೆ.