ಬೆಂಗಳೂರು, ನ.28 (DaijiworldNews/PY): "ಅಪಾಯಕಾರಿ ಓಮಿಕ್ರಾನ್ ತಡೆಗೆ ಮುಂಜಾಗರೂಕತೆಯೇ ಮದ್ದು" ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೋವಿಡ್ ರೂಪಾಂತರ ತಳಿ ಓಮಿಕ್ರಾನ್ ಈಗ ಜಾಗತಿಕ ಮಟ್ಟದಲ್ಲಿ ತಲ್ಲಣ ಉಂಟು ಮಾಡಿದೆ. ಇದು ದೇಶ ಪ್ರವೇಶಿಸಿದರೆ ಕೋವಿಡ್ 2ನೇ ಅಲೆಗಿಂತಲೂ ಗಂಡಾಂತರ ತರಬಹುದು. ಕೋವಿಡ್ 1 ಹಾಗೂ 2ನೇ ಅಲೆಯನ್ನು ನಿಭಾಯಿಸುವಲ್ಲಿ ಎರಡೂ ಸರ್ಕಾರಗಳು ವಿಫಲವಾಗಿದ್ದವು. ಸರ್ಕಾರ ಇತಿಹಾಸದಿಂದ ಪಾಠ ಕಲಿಯಬೇಕು. ಓಮಿಕ್ರಾನ್ ರೋಗ ತಡೆಗೆ ಈಗಿಂದಲೇ ಸಿದ್ದತೆ ನಡೆಸಬೇಕು" ಎಂದಿದ್ದಾರೆ.
"ಅಪಾಯಕಾರಿ ಓಮಿಕ್ರಾನ್ ತಡೆಗೆ ಮುಂಜಾಗರೂಕತೆಯೇ ಮದ್ದು. ಸರ್ಕಾರ ಓಮಿಕ್ರಾನ್ ವೈರಸ್ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಕೋವಿಡ್ 1 ಮತ್ತು 2ನೇ ಅಲೆ ಲಕ್ಷಾಂತರ ಜನರ ಪ್ರಾಣ ತೆಗೆದಿದೆ. ಇದು ಓಮಿಕ್ರಾನ್ ವಿಚಾರದಲ್ಲಿ ಮರುಕಳಿಸಬಾರದು. ಜನರ ಪ್ರಾಣ ರಕ್ಷಣೆ ಸರ್ಕಾರದ ಕೈಲಿದೆ. ಸರ್ಕಾರ ಓಮಿಕ್ರಾನ್ ಸೋಂಕು ಹರಡದಂತೆ ಜವಾಬ್ಧಾರಿ ಹೊರಬೇಕು" ಎಂದು ತಿಳಿಸಿದ್ದಾರೆ.