ಬೆಂಗಳೂರು, ನ.28 (DaijiworldNews/PY): "ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯೊಂದಿಗೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿಲ್ಲ. ನಮ್ಮ ಅಭ್ಯರ್ಥಿಗಳು ಆರು ಕಡೆ ಮಾತ್ರವೇ ಸ್ಪರ್ಧಿಸಲಿದ್ದಾರೆ. ಉಳಿದ 19 ಕಡೆಗಳಲ್ಲಿ ನಮ್ಮ ಅಭ್ಯರ್ಥಿಗಳು ನಿಂತಿಲ್ಲ. ಹಾಗಾಗಿ ಸಹಕಾರ ನೀಡುವಂತೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಜೆಡಿಎಸ್ ಬೆಂಬಲ ಕೇಳಿದ್ದಾರೆ. ಬಿಜೆಪಿ ಬೆಂಬಲಿಸುವ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುವುದು" ಎಂದು ಹೇಳಿದ್ದಾರೆ.
"ಜೆಡಿಎಸ್, ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಆದರೆ, ಪರಿಷತ್ ಚುನಾವಣೆಯ ವಿಚಾರವಾಗಿ ಯಡಿಯೂರಪ್ಪ ಜೆಡಿಎಸ್ ಬೆಂಬಲ ಕೇಳಿರುವುದು ನಿಜ. ಆದರೆ, ಈವರೆಗೆ ಕಾಂಗ್ರೆಸ್ ನಮ್ಮ ಬೆಂಬಲ್ಲ ಕೇಳಿಲ್ಲ" ಎಂದಿದ್ಧಾರೆ.
"ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ನಮ್ಮನ್ನು ಬಿಜೆಪಿ ಬಿ ಟೀಂ ಎಂದು ಕರೆಯುತ್ತಿದೆ. ಆದರೆ, ಸಂಸತ್ ಚುನಾವಣೆಯ ಸಂದರ್ಭ ಯಾರು ಯಾರನ್ನು ಗೆಲ್ಲಿಸಿದರು? ಕಾಂಗ್ರೆಸ್ ಅನ್ನು ಯಾವ ಟೀಂ ಎಂದು ಕರೆಯಬೇಕು?" ಎಂದು ಕೇಳಿದ್ದಾರೆ.