ಬೆಂಗಳೂರು, ನ.28 (DaijiworldNews/PY): "ಒಂದಲ್ಲ ಒಂದು ದಿನ ಕೃಷಿ ಸುಧಾರಣೆ ಕಾಯ್ದೆಯನ್ನು ಜಾರಿಗೆ ತನ್ನಿ ಎಂದು ರೈತರೇ ಬೀದಿಗಿಳಿಸು ಹೋರಾಡಲಿದ್ದಾರೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೃಷಿ ತಿದ್ದುಪಡಿ ಕಾಯ್ದೆ ರೈತ ವಿರೋಧಿಯಲ್ಲ. ಆದರೆ, ಕೆಲವರಿಗೆ ಮನವರಿಕೆ ಮಾಡಲು ವಿಫಲರಾಗಿದ್ದೇವೆ" ಎಂದಿದ್ದಾರೆ.
"ಕೃಷಿ ತಿದ್ದುಪಡಿ ಮಸೂದೆಯಲ್ಲಿ ರೈತರಿಗೆ ಮಾರಕವಾದ ಅಂಶಗಳಿಲ್ಲ. ಆದರೆ, ಕೆಲವರಿಗೆ ಮನವರಿಗೆ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ತಿಳಿಸಿದ್ದಾರೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ದ ಕಿಡಿಕಾರಿದ ಅವರು, "ರೀಡೂ ಒಂದು ಭ್ರಷ್ಟಾಚಾರದ ಕೂಪ. ಕೆಂಪಣ್ಣ ಆಯೋಗದ ವರದಿ ಬಹಿರಂಗಪಡಿಸಿದರೆ ಸತ್ಯ ಬಯಲಾಗುತ್ತದೆ. ಕೈ ನಾಯಕರು ಎಷ್ಟು ಪ್ರಾಮಾಣಿಕರು ಎಂದು ತಿಳಿಯುತ್ತದೆ" ಎಂದಿದ್ದಾರೆ.