ಬೆಂಗಳೂರು, ನ.28 (DaijiworldNews/PY): "ಸಿದ್ದರಾಮಯ್ಯನವರೇ, ಅಂದ ಹಾಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಭ್ರಷ್ಟಾಚಾರದ ಪಿಸುಮಾತು ಪ್ರಕರಣದ ಬಗ್ಗೆ ತನಿಖೆ ನಡೆಸುವುದು ಯಾರು? ಡಿಕೆಶಿ ಆರೋಪಿ ಸ್ಥಾನದಲ್ಲಿದ್ದಾರೆ. ನಿಮ್ಮ ಆಪ್ತ ಉಗ್ರಪ್ಪ ಆರೋಪಿಸಿದ್ದಾರೆ. ನೀವೇ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರ್ಸಂಟೇಜ್ ಏರಿಕೆಯಾಗಿದೆ. ತನಿಖೆ ಯಾರು ನಡೆಸಬೇಕು ಪರ್ಸಂಟೇಜ್ಸೀದಾರೂಪಯ್ಯ !?" ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, "ಪರ್ಸೆಂಟ್ ರಾಜಕಾರಣದ ಪಿತಾಮಹರು ಯಾರು? 12% ಡಿಕೆಶಿ, 10% ಸೀದಾರೂಪಯ್ಯ. ಮೆಂದ ಇಲಾಖೆಗಳು-ಲೋಕೋಪಯೋಗಿ, ಇಂಧನ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ. ಹಾಗಾದರೆ ಈ ಇಲಾಖೆಗಳನ್ನು ನಿಭಾಯಿಸಿದ್ದ ಡಾ.ಎಚ್.ಸಿ. ಮಹಾದೇವಪ್ಪ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲರ ಪರ್ಸೆಂಟೇಜ್ ಎಷ್ಟು? ಎಲ್ಲ ಸೇರಿ 40%!!!" ಎಂದು ಟೀಕಿಸಿದೆ.
"ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಸಿದ್ದರಾಮಯ್ಯನವರು ಹೇಳುತ್ತಿರುವುದು ಇವರಿಗೆ ಇರಬೇಕಲ್ಲವೇ? 6 ರಿಂದ 8 % ಇದ್ದ ಲಂಚವನ್ನು 12% ಗೆ ಏರಿಸಿದ್ದೇ ಡಿಕೆಶಿ ಎಂದು ಸಲೀಂ ಬಹಿರಂಗವಾಗಿ ಹೇಳಿದ್ದರ ಬಗ್ಗೆ ಮೊದಲು ಮಾತನಾಡಿ. ಹಾಗಾದರೆ ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿದ್ದೇ ನೀವು ಎಂದಾಯ್ತಲ್ಲವೇ?" ಎಂದು ಕೇಳಿದೆ.
"ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದಲ್ಲೇ ಅಲ್ಲವೇ ಡಿಕೆಶಿ ಇಂಧನ ಸಚಿವರಾಗಿದ್ದದ್ದು? ಅವರ ಕಾಲದಲ್ಲೇ ಭ್ರಷ್ಟಾಚಾರ 12% ಗೆ ಏರಿಕೆ ಆಯ್ತು ಎಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಿಸುಮಾತು ಪ್ರಕರಣದಿಂದ ತಿಳಿದು ಬಂದಿದೆ. ಇದರಲ್ಲಿ ನಿಮ್ಮ ಪಾಲೆಷ್ಟು ಸೀದಾರೂಪಯ್ಯ?" ಎಂದು ಪ್ರಶ್ನಿಸಿದೆ.
"ಗುತ್ತಿಗೆದಾರರ ಒಕ್ಕೂಟ ಬರೆದ ಪತ್ರವನ್ನು ಆಧರಿಸಿ ತನಿಖೆ ನಡೆಸುವುದಕ್ಕೆ ಸಿಎಂ ಈಗಾಗಲೇ ಆದೇಶ ನೀಡಿದ್ದಾರೆ. ತಾವು ಮುಖ್ಯಮಂತ್ರಿಯಾದ ಬಳಿಕ ನಡೆದ 10 ಕೋಟಿ ಮೇಲ್ಪಟ್ಟ ಎಲ್ಲ ಟೆಂಡರ್ಗಳ ಪರಿಶೀಲನೆಗೂ ಸೂಚನೆ ನೀಡಿದ್ದಾರೆ. ನಿಮ್ಮ ಬಗ್ಗೆ ಹೇಳಿ, ಭ್ರಷ್ಟಾಚಾರದ ಪಿಸುಮಾತಿಗೆ ನೀವು ಉತ್ತರದಾಯಿಯಲ್ಲವೇ?" ಎಂದು ಕೇಳಿದೆ.
"ಸಿದ್ದರಾಮಯ್ಯನವರೇ, ಅಂದ ಹಾಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಭ್ರಷ್ಟಾಚಾರದ ಪಿಸುಮಾತು ಪ್ರಕರಣದ ಬಗ್ಗೆ ತನಿಖೆ ನಡೆಸುವುದು ಯಾರು? ಡಿಕೆಶಿ ಆರೋಪಿ ಸ್ಥಾನದಲ್ಲಿದ್ದಾರೆ. ನಿಮ್ಮ ಆಪ್ತ ಉಗ್ರಪ್ಪ ಆರೋಪಿಸಿದ್ದಾರೆ. ನೀವೇ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರ್ಸಂಟೇಜ್ ಏರಿಕೆಯಾಗಿದೆ. ತನಿಖೆ ಯಾರು ನಡೆಸಬೇಕು ಪರ್ಸಂಟೇಜ್ಸೀದಾರೂಪಯ್ಯ!?" ಎಂದು ಪ್ರಶ್ನಿಸಿದೆ.