ಬೆಳಗಾವಿ, ನ.28 (DaijiworldNews/PY): "ರಮೇಶ್ ಜಾರಕಿಹೊಳಿ ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮೋಸ ಮಾಡುವುದಿಲ್ಲ" ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೊದಲನೇ ಓಟ್ ಬಿಜೆಪಿಗೆ, ಎರಡನೇ ಓಟ್ ತಮ್ಮನಿಗೆ ಕೊಡಿ ಎಂದು ರಮೇಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಹಾಗಾಗಿ ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮೋಸ ಮಾಡುವುದಿಲ್ಲ" ಎಂದಿದ್ದಾರೆ.
ರಮೇಶ್ ಕಾಂಗ್ರೆಸ್ನಲ್ಲೂ ಮೋಸ, ಬಿಜೆಪಿಯಲ್ಲೂ ಮೋಸ ಮಾಡುತ್ತಿದ್ಧಾರೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕಾಂಗ್ರೆಸ್ನಲ್ಲಿ ಇದ್ದಾಗ ರಮೇಶ್ ಜಾರಕಿಹೊಳಿ ಕಾಂಗ್ರೆಸ್ಗೆ ಮೋಸ ಮಾಡಿದರೆಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರೇ? ಇದು ಕಾಂಗ್ರೆಸ್ ಬಿಟ್ಟು ಬಂದಾಗ ನೆನಪಾಗಿದೆ. ಸತ್ಯವನ್ನು ಸತ್ಯವಾಗಿ ಹೇಳಿದರೆ ಅದು ಸತ್ಯ. ಅದೇ ಸತ್ಯವನ್ನು ತಿರುಚಿ ಹೇಳಿದರೆ ಹೇಗೆ?" ಎಂದು ಪ್ರಶ್ನಿಸಿದ್ದಾರೆ.
ಒಂದೇ ವೇದಿಕೆಯಲ್ಲಿ ಲಖನ್ ಹಾಗೂ ರಮೇಶ್ ಪ್ರತ್ಯೇಕ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅಭ್ಯರ್ಥಿಯೋರ್ವ ಮೊದಲ ಓಟ್ ತನಗೆ ಹಾಕಬೇಕು ಎಂದು ಹೇಳಬೇಕು ಅಷ್ಟೇ. ಇಡೀ ದೇಶದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವಿಲ್ಲ" ಎಂದಿದ್ಧಾರೆ.