ನವದೆಹಲಿ, ನ.28 (DaijiworldNews/PY): ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ಐಸಿಸ್ನಿಂದ ಮೂರನೇ ಬಾರಿಗೆ ಕೊಲೆ ಬೆದರಿಕೆ ಬಂದಿದೆ.
ಭಾನುವಾರ ಬೆಳಗ್ಗೆ ಗೌತಮ್ ಗಂಭಿರ್ ಅವರಿಗೆ ಇ-ಮೇಲ್ ಬಂದಿದೆ. ಒಂದು ವಾರದೊಳಗೆ ಐಸಿಸ್ನಿಂದ ಬಂದ ಮೂರನೇ ಕೊಲೆ ಬೆದರಿಕೆ ಇದಾಗಿದೆ.
ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವರನ್ನು ಹತ್ಯೆ ಮಾಡುತ್ತೇವೆ ಎಂದು ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
"ವಿಶೇಷ ಸೈಬರ್ ಕ್ರೈಂ ಸೆಲ್ಗೆ ದೂರನ್ನು ನೀಡಲಾಗಿದ್ದು, ಇ-ಮೇಲ್ನ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ" ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ಧಾರೆ.
"ಬೆದರಿಕೆ ಹಿನ್ನೆಲೆ ಗೌತಮ್ ಗಂಭೀರ್ ಅವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.